ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶನಿವಾರ ನ. 08) ದಾಸಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಜಾತಿ ಆಧಾರಿತ ಅಸಮಾನತೆ, ಅನ್ಯಾಯಗಳಿಂದ ನಲುಗಿ ಹೋಗಿದ್ದ ಸಮಾಜದಲ್ಲಿ ಕೀರ್ತನೆಗಳ ಮೂಲಕ ಸಮಾನತೆಯ ಕಿಡಿ ಹಚ್ಚಿದವರು ದಾಸಶ್ರೇಷ್ಠ ಕನಕದಾಸರು ಎಂದರು. ಇದನ್ನೂ ಓದಿ: ಕಬ್ಬು ಬೆಳೆಗಾರರ ಹಠಕ್ಕೆ ಮಣಿದ ಸರ್ಕಾರ
ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಜಗತ್ತು ಒಗ್ಗೂಡಬೇಕು ಎನ್ನುವ ಕನಕದಾಸರ ಆಶಯಗಳನ್ನು ಅರಿತು, ಅದರಂತೆ ಬಾಳೋಣ. ನಾಡಬಂಧುಗಳಿಗೆ ಕನಕದಾಸ ಜಯಂತಿಯ ಶುಭಾಶಯಗಳು. ದಾಸರ ಜೀವನ ಆದರ್ಶಗಳನ್ನು ನೆನೆಯುತ್ತಾ, ವಿಶ್ವಚೇತನಕ್ಕೆ ನಮಿಸುತ್ತೇನೆ ಎಂದರು.
