ಕಾರವಾರ: ಯೂಟ್ಯೂಬರ್ ಮುಕುಳಪ್ಪ ಹಿಂದೂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಯುವತಿ ಗಾಯಿತ್ರಿ ಅವರ ತಂದೆ, ತಾಯಿ ಮುಕಳೆಪ್ಪ ವಿರುದ್ಧ ನಮ್ಮ ಮಗಳನ್ನು ಉದ್ದೇಶಪೂರ್ವಕವಾಗಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಗಾಯಿತ್ರಿ ತಂದೆ, ತಾಯಿ ದೂರಿನ ಆಧಾರದ ಮೇಲೆ ಗಾಯಿತ್ರಿಯನ್ನು ಪೋಲಿಸ್ ಅಧಿಕಾರಿಗಳು ಕರೆಸಿ ವಿಚಾರಿಸಿದಾಗ ಅವರಿಬ್ಬರು ಒಬ್ಬರಿಗೊಬ್ಬರು ಪರಸ್ಪರ ಓಪ್ಪಿ ಕಾನೂನು ಬದ್ಧವಾಗಿ ಮದುವೆಯಾಗಿದ್ದಾರೆ ಎಂದು ಮುಕಳೆಪ್ಪ ಹಾಗೂ ಗಾಯತ್ರಿಯವರು ಪೋಲಿಸ್ ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಮುಕಳೆಪ್ಪ ಹಾಗೂ ಗಾಯಿತ್ರಿ ಅವರು ಮದುವೆ ಸಂದರ್ಭದಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ವಿವಾಹವಾಗಿದ್ದಾರೆ ಎಂದು ವಿವಾಹ ನೋಂದಣಾಧಿಕಾರಿ ವಿರುದ್ಧ ಗಾಯತ್ರಿ ಅವರ ತಂದೆ, ತಾಯಿ ಸೇರಿದಂತೆ ಶ್ರೀರಾಮ ಸೇನೆ ಸಂಘಟನೆಯು ದೂರು ದಾಖಲಿಸಿದ್ದರು. ಆ ದೂರನ್ನು ಆಧರಿಸಿ ಇದೀಗ ವಿವಾಹ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ನಟನೆ, ವಿಭಿನ್ನ ಪಾತ್ರದ ಪೋಸ್ಟರ್ ಅರಿವಿಲ್ ಮಾಡಿದ ಚಿತ್ರತಂಡ
ಹೌದು, ಮುಕಳೆಪ್ಪ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಯೂಟ್ಯೂಬರ್ ಮುಕಳೆಪ್ಪ ನಕಲಿ ದಾಖಲೆ ನೀಡಿ ನೋಂದಣಿ ಮಾಡಿಕೊಂಡ ಕುರಿತು ಶ್ರೀರಾಮ ಸೇನೆ ಹಾಗೂ ಗಾಯಿತ್ರಿ ತಾಯಿ ಶಿವಕ್ಕ ದೂರು ಕೊಟ್ಟ ಬೆನ್ನಲ್ಲೇ ಇದೀಗ ಕಾರವಾರದ ಲೋಕಾಯುಕ್ತ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ವಿವಾಹ ನೋಂದಣಾಧಿಕಾರಿ ಕಚೇರಿಗೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಕಾರವಾರದ ಲೋಕಾಯುಕ್ತ ಡಿವೈಎಸ್ಪಿ ಧನ್ಯ ನಾಯಕ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮುಂಡಗೋಡು ನೋಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಮೀರಿ ಫೇಕ್ ದಾಖಲೆ ಬಳಸಿ ವಿವಾಹ ನೋಂದಣಿ ಮಾಡಿಕೊಂಡ ಕುರಿತು ದೂರು ನೀಡಲಾಗಿತ್ತು. ಇದಲ್ಲದೇ, ಜಿಲ್ಲೆಯ ನೋಂದಣಾಧಿಕಾರಿ ಕಚೇರಿಯಲ್ಲಿ ನಿಯಮ ಬಾಹಿರ ನೋಂದಣಿ ಮಾಡಿಕೊಂಡ ಹಾಗೂ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ವಿವಾಹ ನೋಂದಣಾಧಿಕಾರಿ ಕಚೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
