ಶಹಾಪುರ: ಹೂವಿನ ಹಡಗಲಿ (ವಿಜಯನಗರ ಜಿಲ್ಲೆ) ಯಲ್ಲಿ ಹುಬ್ಬಳ್ಳಿಯ ಹೊಟೇಲ್ ಉದ್ಯಮಿ ಹಾಗೂ ಸಿವಿಲ್ ಕಾಮಗಾರಿಗಳ ಗುತ್ತಿಗೆದಾರ ಆನಂದ ಉಮೇಶ ಹೆಗಡೆ (40) ಸಾವಿಗೆ ನ್ಯಾಯ ಕೊಡಿಸಬೇಕು ಮತ್ತು ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಮಾಳಿಂಗರಾಯ ಬಿ.ತಾಳಿಕೋಟಿ ಆಗ್ರಹಿಸಿದ್ದಾರೆ.
ಮೃತ ಗುತ್ತಿಗೆದಾರ ಆನಂದ ಅವರು ಖಾಸಗಿ ಫೈನಾನ್ಸ್ ನಿಂದ ಲಕ್ಷಾನುಗಟ್ಟಲೆ ಸಾಲ ಮಾಡಿಕೊಂಡಿದ್ದರು. ಮತ್ತು ಟೆಂಡರ್ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದರು. ಸಾಲ ಮಾಡಿಕೊಂಡ ಎಷ್ಟೊ ಗುತ್ತಿಗೆದಾರರಿಗೆ ಸರ್ಕಾರ ಬಿಲ್ ಮಾಡದ ಹಿನ್ನಲೇ ಸಾಲಕೊಟ್ಟವರ ಕಿರುಕುಳಕ್ಕೆ ಗುತ್ತಿಗೆದಾರರಿಗೆ ಸಾವೇ ಗತಿ ಎನ್ನುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಗುತ್ತಿಗೆದಾರರ ಸಾವಿಗೆ ಕಾರಣರಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅದೆಷ್ಟೊ ಗುತ್ತಿಗೆದಾರರು ಮಾಡಿದ ಸಾಲ ತೀರಿಸದೆ ಆತ್ಮಹತ್ಯೆ ದಾರಿ ಹಿಡಿದ್ದಾರೆ. ಹಿಂದಿನ ಸರ್ಕಾರಕ್ಕಿಂತ ಪ್ರಸ್ತುತ ಎಲ್ಲಾ ಇಲಾಖೆಗಳಲ್ಲೂ ಕಮಿಷನ್ ದಂಧೆ ದುಪ್ಪಟ್ಟಾಗಿದೆ. ಬಾಕಿ ಬಿಲ್ ಪಾವತಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲಾ. ಕಾಮಗಾರಿಗಳನ್ನು ಪ್ಯಾಕೇಜ್ ಪದ್ಧತಿಯಲ್ಲಿ ಕಾಮಗಾರಿ ಮಾಡಲು ಸಶಕ್ತರಿಲ್ಲದ ನಿರ್ಮಿತಿ ಕೇಂದ್ರ, ಲ್ಯಾಂಡರ್ಮಿಗಳಂತಹ ಇಲಾಖೆಗೆ ಕಾಮಗಾರಿ ನೀಡಬಾರದು, ಕೂಡಲೇ ಪ್ಯಾಕೇಜ್ ಪದ್ಧತಿಯನ್ನು ಕೈಬಿಡಬೇಕು. ಎಲ್ಲೇಡೆ ಲ್ಯಾಂಡರ್ಮಿ, ನಿರ್ಮಿತಿ ಕೇಂದ್ರ ಸೇರಿ ಇತರೆ ಸಂಸ್ಥೆಗಳ ಕಾಮಗಾರಿ ಕಳಪೆಯಾಗಿದ್ದು, ಆಯಾ ಕ್ಷೇತ್ರದ ಜನಪ್ರತಿನಿಧಿಗಳಿಗೆ. ಶೇ.15 ರಿಂದ 20 ರಷ್ಟು ಕಮಿಷನ್ ನೀಡಿ ಕಾಮಗಾರಿ ಪಡೆಯುತ್ತಿರುವುದು ಖಡನೀಯ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಗೆ ಬೇಗ ಸಿಎಂ ಆಗಬೇಕೆಂಬುದು ಬಿಟ್ಟರೆ ತಲೆಯಲ್ಲಿ ಇನ್ನೇನೂ ಇಲ್ಲ: ಶೋಭಾ ಕರಂದ್ಲಾಜೆ
ಸರ್ಕಾರದಲ್ಲಿ ಅನುದಾನ ಇದ್ದರೆ ಮಾತ್ರ ಕಾಮಗಾರಿಗಳ ಟೆಂಡರ್ ಕರೆಯಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರು ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳನ್ನು ಬೇಟಿ ಮಾಡಿ ಬಂದರೂ ಸಹ ಯಾವುದೇ ಪ್ರಯೋಜನವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಗುತ್ತಿಗೆದಾರರಿಗೆ ವಂಚಿಸಿದ್ದಾರೆ. ಗುತ್ತಿಗೆದಾರರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥೀತಿ ಇದ್ದು, ಕುಟುಂಬಸ್ಥರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟುತ್ತೆ.
ಕೂಡಲೇ ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ರಾಜ್ಯದ್ಯಂತ ಗುತ್ತಿಗೆದಾರರ ಮಾರಾಣ ಹೋಮ (ಸರಣಿ ಆತ್ಮಹತ್ಯೆಗೆ) ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
