Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ: ಬೊಮ್ಮಾಯಿ
  • Bangalore
  • Politics
  • State

ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ: ಬೊಮ್ಮಾಯಿ

Praja Vahini October 31, 2025 1 minute read
WhatsApp Image 2025-10-31 at 14.23.41
Spread the love

ಬೆಂಗಳೂರು: ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹೊರಗಡೆಯಿಂದ ಸವಾಲಿದೆ. ಕನ್ನಡದ ಮೇಲೆ ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ. ಅವರೆಲ್ಲರನ್ನು ಸರಿಪಡಿಸಿಕೊಂಡು ಕನ್ನಡವನ್ನು ಮೇಲೆತ್ತುವ ಕೆಲಸ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ. ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಸೋಮಶೇಖರ್ ಅವರ ಕಾರ್ಯಕ್ರಮದಲ್ಲಿ ಮಾತು ಕೇಳಬೇಕು. ಮಾತನಾಡುವುದು ಎಐ ಮೂಲಕವೂ ನಡೆಯುತ್ತದೆ. ಮಾತಿಗೆ ಬೆಲೆ ಬರಬೇಕು. ಮಾತಿನಂತೆ ನಡೆಯುವ ಶಕ್ತಿ ನಾವೆ ಪಡೆಯಬೇಕು. ಎಲ್ಲ ಅವಕಾಶ ಭಗವಂತ ಕೊಟ್ಟಿದ್ದಾನೆ. ನಾವು ಮಾತಿನಂತೆ ನಡೆದಿದ್ದೇವೊ ಇಲ್ಲವೋ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ನಿರಂತರವಾಗಿ ನಮ್ಮೊಡನೆ ಮಾತನಾಡುತ್ತಿರುತ್ತೇವೆ. ನಮ್ಮ ಆತ್ಮೀಯ ಸ್ನೇಹಿತ ಅಂದರೆ ನಮಗೆ ನಾವೇ ಇನ್ನೊಬ್ಬನಿಗೆ ಸುಳ್ಳು ಹೇಳಬೆಕೆಂದರೆ ನಮ್ಮೊಳಗೆ ಹೇಳುತ್ತೇವೆ. ನಮ್ಮ ನೆರಳಿಗೆ ಹೆದರಿ ನಡೆಯುವುದು ನಮ್ಮ ಸಂಸ್ಕೃತಿ. ಸಂಸ್ಕೃತಿಯ ಬಗ್ಗೆ ಬಹಳ ಚರ್ಚೆಯಾಗಿದೆ. ಅವೆಲ್ಲವೂ ಮಾನವೀಯ ಸಂಸ್ಕೃತಿಯಿಂದ ಹೊರ ಬಂದಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಮತ್ತು ನಾಗರಿಕತೆಯ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಒಬ್ಬ ಶ್ರೀಮಂತನನ್ನು ದೊಡ್ಡ ಸುಸಂಸ್ಕೃತ ಅಂತ ಹೊಗಳುತ್ತೇವೆ. ಆತನನ್ನು ಹತ್ತಿರದಿಂದ ನೋಡಿದಾಗ ಗೊತ್ತಾಗುತ್ತದೆ. ನಾಗರಿಕತೆ ಅಂದರೆ ಸೈಕಲ್ ಇತ್ತು, ಬೈಕ್, ಬಸ್ ಬಂತು, ಈಗ ವಿಮಾನ ಬಂದಿದೆ‌ ನಗರಗಳು ಬೆಳೆದಿವೆ. ನಮ್ಮ ಬಳಿ ಏನಿದೆ ಅದು ನಾಗರಿಕತೆ ನಾವು ಏನಾಗಿದ್ದೇವೆ ಅದು ಸಂಸ್ಕೃತಿ. ನಮ್ಮ ಬಳಿ ಏನೇ ಶ್ರೀಮಂತಿಕೆ ಬಂದರೂ ಎಷ್ಟು ಉಸಿರಾಡುತ್ತೇವೊ ಅಷ್ಟೇ ಉಸಿರಾಡುತ್ತೇವೆ. ಗಾಳಿ, ಬೆಳಕು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳಿದರು.

ಸುಸಂಸ್ಕೃತರಿಗೆ ಪ್ರಶಸ್ತಿ

ನಮ್ಮ ಕನ್ನಡದಲ್ಲಿ ಸಂಸ್ಕೃತಿಯನ್ನು ಯಾವ ರೀತಿ ಅರ್ಥೈಸಿದ್ದೇವೆ ಅದು ನಮ್ಮ ಸಂಸ್ಕೃತಿ ನಮ್ಮ ಸೊಮಶೇಖರ ಅವರು ಜ್ಞಾನದ ಸಂಸ್ಕೃತಿ ಹೊಂದಿರುವವರಿಗೆ ಪ್ರಶಸ್ತಿ ನೀಡುತ್ತ ಬಂದಿದ್ದಾರೆ. ಅವರು ಹಲವಾರು ಪುಸ್ತಕ ಬರೆದಿದ್ದಾರೆ. ಅಧಿಕಾರಿಯಾಗಿ ಕನ್ನಡಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅನೇಕ ಅಧಿಕಾರಿಗಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದನ್ನು ಅಧಿಕಾರ ಓವರ್ ಟೇಕ್ ಮಾಡಿದಾಗ ಪ್ರತಿಭೆ ಗೌಣವಾಗುತ್ತದೆ. ಸೋಮಶೇಖರ್ ಅವರಲ್ಲಿ ಪ್ರತಿಭೆ ಕಡಿಮೆಯಾಗಿಲ್ಲ. ಇದನ್ನೂ ಓದಿ: ದರ್ಶನ್ ಪವಿತ್ರ ಗೌಡಗೆ ಮದುವೆಯಾಗಿದ್ರಾ? ಹಳೆ ಫೋಟೋ ವೈರಲ್!

ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವುದು ಸಂತೋಷದ ಸುದ್ದಿ, ಸಾಹಿತ್ಯ ಅಂದರೆ ರಾಜಕೀಯ, ಮನಷ್ಯ ರಾಜಕೀಯ ಜೀವಿ ಪ್ರತಿಯೊಬ್ಬರ ಮನೆಯಲ್ಲಿಯೂ ರಾಜಕೀಯ ಇದೆ‌.  ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹೊರಗಡೆಯಿಂದ ಸವಾಲಿದೆ. ಕನ್ನಡದ ಮೇಲೆ ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೊಡುತ್ತಾರೆ. ಅವರೆಲ್ಲರನ್ನು ಸರಿಪಡಿಸಿಕೊಂಡು ಮೇಲೆತ್ತುವ ಕೆಲಸ ಆಗಬೇಕಿದೆ. ಕನ್ನಡಕ್ಕೆ ಯಾವುದೆ ಕುತ್ತಿಲ್ಲ. ಕನ್ನಡ ಯಾವತ್ತೂ ನಶಿಸಲು ಸಾಧ್ಯವಿಲ್ಲ ಎಂದರು.

 

About the Author

Praja Vahini

Editor

View All Posts

Spread the love

Post navigation

Previous: ಅಲೆಮಾರಿ ಸಮುದಾಯಕ್ಕೆ ಶೇ. 1 ರಷ್ಟು ಮೀಸಲಾತಿ ಒದಗಿಸಲು ಸರ್ಕಾರ ಬದ್ಧ : ಸಿಎಂ
Next: ಬಿಜೆಪಿಗೂ RSS ಗೂ ಏನು ಸಂಬಂಧ?: ಪ್ರಿಯಾಂಕ್ ಖರ್ಗೆ

Views:

34

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.