ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೆರೆವಾಸ ಅನುಭವಿಸುತ್ತಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ಅವರು ಜೈಲಿನಲ್ಲಿ ಪಡಬಾರದ ಕಷ್ಟಗಳನ್ನು ಪಡುತ್ತಿದ್ದಾರೆ.
ಹೌದು, ನಟಿ ಪವಿತ್ರಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸುತ್ತಿದ್ದರು ಎಂಬ ಕಾರಣಕ್ಕೆ 17 ಜನ ಸೇರಿಕೊಂಡು ರೇಣುಕಾಸ್ವಾಮಿ ಕೊಲೆ ಮಾಡಿದ್ದರು.
ಇನ್ನು ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಜೈಲು ಸರಿವಾಸ ಅನುಭವಿಸುತ್ತಿರುವ ನಟಿ ಪವಿತ್ರ ಗೌಡ ಹಾಗೂ ದರ್ಶನ್ ಅವರ ಸಾಂಪ್ರದಾಯಿಕ ಮದುವೆ ಉಡುಪಿನಲ್ಲಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಯೆಸ್…ಮದುವೆ ಉಡುಪಿನಲ್ಲಿ ಮಿಂಚುತ್ತಿರುವ ದರ್ಶನ್ ಹಾಗೂ ಪವಿತ್ರ ಗೌಡ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ಬಾರಿ ಸದ್ದು ಮಾಡುತ್ತಿದೆ.
ಸದ್ಯ ವೈರಲ್ ಆಗಿರುವ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಇಬ್ಬರೂ ಪಕ್ಕಾ ಮದುಮಕ್ಕಳ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ಇವರು ಮದುವೆಯ ಫೋಟೋ ಇರುವಂತಿದೆ. ಹಾಗಾಗಿ ಇವರು ಮದುವೆಯಾಗಿರೋದು ಪಕ್ಕಾ ಅಂತಿದ್ದಾರೆ ನೆಟ್ಟಿಗರು. ಇದನ್ನೂ ಓದಿ: ಖಾಕಿ ಧರಿಸಿದ ಡಿಂಪಲ್ ಕ್ವೀನ್
ಅಂದ ಹಾಗೆ ಈ ಫೋಟೋಗಳು ನಿಜವಾಗಿಯೂ ಅವರ ಮದುವೆಯದ್ದಾ ಅಥವಾ ಯಾವುದಾದರೂ ಪೂಜೆ, ಫಂಕ್ಷನ್ನಲ್ಲಿ ತೆಗೆದಿದ್ದಾ ಅನ್ನೋದು ಮಾತ್ರ ನಿಗೂಢವಾಗಿದೆ.
ಅಲ್ಲದೆ ವೈರಲ್ ಆಗಿರುವ ಫೋಟೋದಲ್ಲಿ ಪವಿತ್ರಾ ಕತ್ತಿನಲ್ಲಿ ಅರಿಶಿಣದ ದಾರ ತೊಟ್ಟಿರುವುದೂ, ಇಬ್ಬರೂ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಗಮನ ಸೆಳೆದಿದೆ.
