Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸುರಂಗ ರಸ್ತೆ ಎಂಬುದು ದೋಚುವ ತಂತ್ರ ಅಷ್ಟೇ: ಛಲವಾದಿ ನಾರಾಯಣಸ್ವಾಮಿ
  • Bangalore
  • Politics
  • State

ಸುರಂಗ ರಸ್ತೆ ಎಂಬುದು ದೋಚುವ ತಂತ್ರ ಅಷ್ಟೇ: ಛಲವಾದಿ ನಾರಾಯಣಸ್ವಾಮಿ

Praja Vahini October 29, 2025 1 minute read
WhatsApp Image 2025-10-29 at 16.39.18
Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ಮಾಡೋ ಮಾತುಗಳು ಬಹಳ ಚರ್ಚೆಗೆ ಬಂದಿದೆ. ಸುರಂಗ ಮಾರ್ಗ ಆಮೇಲೆ ಮಾಡೋಣ. ಆದರೆ, ರುದ್ರಭೂಮಿಯಲ್ಲಿ ಕೆಲಸ ಮಾಡುವ 147 ಜನ ಕಾರ್ಮಿಕರಿಗೆ ಹಣ ಕೊಡೋ ಯೋಗ್ಯತೆ ಇದೆಯೇ ಇಲ್ಲವೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿರಾರು ಕೋಟಿ ಖರ್ಚಿನಲ್ಲಿ ಸುರಂಗ ಕೊರೆಯೋ ಮಾತನಾಡುವ ಕಾಂಗ್ರೆಸ್ ನವರು, 147 ಜನರಿಗೆ ಸಂಬಳ ಕೊಟ್ಟಿಲ್ಲ. ಅನೇಕರಿಗೆ ಸಂಬಳ ಕೊಡದೆ ವಂಚನೆ ಮಾಡಿದ್ದಾರೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗ್ತಿದ್ದಾರಾ.? ರಸ್ತೆ ಗುಂಡಿ ಮುಚ್ಚಲು ಆಗ್ತಿಲ್ಲ ನಿಮಗೆ ಎಂದು ಕೇಳಿದರು. ಇದನ್ನೂ ಓದಿ: ನವಂಬರ್ ಕ್ರಾಂತಿ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನೆ?

ಸುರಂಗ ಎಂಬುದು ದೋಚುವ ತಂತ್ರ ಅಷ್ಟೇ ಎಂದು ಆರೋಪಿಸಿದ ಅವರು, ಬಿಹಾರ ಚುನಾವಣೆಗೆ ಹಣ ಕಳಿಸಲು ಎಲ್ಲೆಲ್ಲಿ ಸಭೆ ಆಗ್ತಿದೆ. ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್ ಆಗ್ತಿದೆ. ಅದಕ್ಕೆ  ಕಾಂಗ್ರೆಸ್ ಕಚೇರಿಗೇ ದೊಡ್ಡ ಬೀಗ ಹಾಕಬೇಕು ಅಂತ ರಾಜಣ್ಣ ಹೇಳಿದ್ದಾರೆ ಎಂದು ವಿಶ್ಲೇಷಿಸಿದರು.

ಹೇಗಿದ್ದರೂ ಹಾಕೋದು ಹಾಕ್ತೀರಾ, 7 ಲಿವರ್ ನವತಾಳ್ ಬೀಗ ಹಾಕಿ ಯಾರೂ ತೆಗೆಯಲು ಆಗಲ್ಲ ಎಂದು ವ್ಯಂಗ್ಯವಾಗಿ ನುಡಿದರು. ಕಾಂಗ್ರೆಸ್ ನಾಯಕರಿಗೆ ಆಪತ್ತು ಬಂದಾಗ ಕಾಂಗ್ರೆಸ್ ನವರೇ ಮಾತಾಡಲ್ಲ. ಅದೇ ಆರೆಸ್ಸೆಸ್‍ಗೆ ಆಪತ್ತು ಬಂದಾಗ ಎಲ್ಲಾ ಅಂಗ ಸಂಘಟನೆಗಳು ಮಾತಾಡ್ತಾವೆ. ನಿಮಗೆ ದಲಿತ ಸಂಘಟನೆಗಳು ಮಾತ್ರ ಬೇಕು. ಕಾಂಗ್ರೆಸ್ ಪಕ್ಷಕ್ಕೆ ಸಂಕಟ ಬಂದಾಗ ದಲಿತರು ಬೇಕಾಗುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸುಡುವ ಮನೆ ಅಂತ ಅಂಬೇಡ್ಕರ್ ಹೇಳಿದ್ದರು. ಅನೇಕ ದಲಿತ ಸಂಘಟನೆಗಳು ಪ್ಯಾಕೇಜ್‍ಗೆ ಬಿದ್ದಿವೆ. ಎಲ್ಲಾ ಪಕ್ಷದಲ್ಲೂ ಇರಿ, ಅಧಿಕಾರ ಪಡೆಯಿರಿ ಅಂತ ಅಂಬೇಡ್ಕರ್ ಹೇಳಿದ್ದರು. ಆದರೆ, ಕಾಂಗ್ರೆಸ್ ಹಾಕೋ ಮೂಳೆಗೆ ಜೋತು ಬಿದ್ದು, ಅಲ್ಲೇ ಇದ್ದೀರಿ. ಯಾರದ್ದೋ ಮಾತಿಗೆ ದಲಿತ ಸಮಾವೇಶ ಮಾಡುತ್ತೀರಿ ಎಂದು ಟೀಕಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ನವಂಬರ್ ಕ್ರಾಂತಿ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನೆ?
Next: ಟನಲ್ ರಸ್ತೆ ವಿಚಾರದಲ್ಲಿ ನಾನು ತಾಂತ್ರಿಕ ತಜ್ಞ ಅಲ್ಲ: ಡಿಕೆಶಿ

Views:

28

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.