ಶಹಾಪುರ: ನಗರದ ಬೆಟ್ಟದಲ್ಲಿರುವ ಸುಕ್ಷೇತ್ರ ಶ್ರೀ ಭಾಗ್ಯವಂತಿ ದೇವಿಯ ಜಾತ್ರೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ದೇವಸ್ಥಾನ ಸಮಿತಿ ಆಶ್ರಯದಲ್ಲಿ ಕುಸ್ತಿ ಪಂದ್ಯ ಜರುಗಿತು. ಸುತ್ತಾಮುತ್ತಾಲಿನ ಗ್ರಾಮದ ಕುಸ್ತಿಪಟುಗಳಲ್ಲದೆ ಹೊರ ರಾಜ್ಯಗಳ ನೂರಾರು ಕುಸ್ತಿ ಪಟುಗಳು ಅಖಾಡಕ್ಕೆ ಇಳಿದು ತಮ್ಮ ಶಕ್ತಿ ಪ್ರದರ್ಶಿಸಿದರು.
ಪ್ರತಿಸ್ಪರ್ಧಿಗಳನ್ನು ಸೋಲಿಸಿ ವಿಜಯಿಯಾಗಿದ್ದಕ್ಕೆ ವೆಂಕಟೇಶ ಧರ್ಮಣ್ಣ ಹಳ್ಳಿಕಟ್ಟಿ ಕುಸ್ತಿಪಟು 5 ಗ್ರಾಂ ಬೆಳ್ಳಿ ಕಡಗ ಮತ್ತು 1001 ರೂ. ಇನ್ನೊರ್ವ ಕುಸ್ತಿಪಟು 2 ಗ್ರಾಂ 501 ರೂ. ಬಹುಮಾನವನ್ನು ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಮಹತ್ವದ ಮೈಲುಗಲ್ಲು ನಿರ್ಮಿಸದ ನಂದಿನಿ ಬ್ರಾಂಡ್
ಈ ಸಂದರ್ಭದಲ್ಲಿ ದೇವಪ್ಪ ಸುರಪುರ, ಲಕ್ಷ್ಮಿಕಾಂತ ನಾಯ್ಕೊಡಿ, ಸಿದ್ದು ಬಯ್ಯರ್, ಪಿಡ್ಡಪ್ಪ, ಹೈಯಾಳಿ, ಮಲ್ಲಿಕಾರ್ಜುನ ಗೌಡಗೇರಿ, ಸರ್ವೋತ್ತಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಕುಸ್ತಿಯ ಪಂದ್ಯವನ್ನು ನೋಡಲು ನೇರೆದಿದ್ದರು.
