Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಶೂ ಎಸೆದ ವಕೀಲನ ಗಡಿಪಾರಿಗೆ ಒತ್ತಾಯಿಸಿ ಪ್ರತಿಭಟನೆ
  • State
  • ಶಹಾಪುರ

ಶೂ ಎಸೆದ ವಕೀಲನ ಗಡಿಪಾರಿಗೆ ಒತ್ತಾಯಿಸಿ ಪ್ರತಿಭಟನೆ

Praja Vahini October 18, 2025 1 minute read
WhatsApp Image 2025-10-18 at 11.36.01
Spread the love

ಶಹಾಪುರ: ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದ ದೇಶದ್ರೋಹಿ ವಕೀಲ ರಾಕೇಶ ಕಿಶೋರ್ ಅವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡುಬೇಕು ಎಂದು ದಲಿತ ಮುಖಂಡರಾದ ಡಾ.ನೀಲಕಂಠ ಬಡಿಗೇರ ಆಗ್ರಹಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಅವರು ಶೂ ಎಸೆಯುವ ಪ್ರಯತ್ನ ಇಡೀ ದೇಶವೇ ತಲೆತಗ್ಗಿಸುವ ವಿಚಾರವಾಗಿದೆ.

ರಾಕೇಶ ಕಿಶೋರ್ ಕಾನೂನು ಪದವಿ ಪಡೆದ ವ್ಯಕ್ತಿ ಎಂಬುವುದನ್ನು ಮರೆತು ಕಾನೂನು ಪರಿಪಾಲನೆ ಮಾಡುವ ದೇಶದ ಅತ್ಯುನ್ನತ ಸ್ಥಾನದಲ್ಲಿ ಇರುವ ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸಿರುವುದು ಈ ದೇಶದ ಸಂವಿಧಾನಕ್ಕೆ ಮಾಡಿದ ಅಪಮಾನ. ಹಾಗಾಗಿ ವಕೀಲ ಕಿಶೋರ್ ರಾಕೇಶನನ್ನು ದೇಶ ದ್ರೊಹದ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ವಕೀಲನನ್ನು ಬಂಧಿಸಿ ಗಡಿಪಾರು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ತಹಸೀಲ್ದಾರ ಮೂಲಕ ರಾಷ್ಟçಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಆರೋಪಿ ಗಡಿಪಾರು ಮಾಡಬೇಕು

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲೆ ನಡೆದ ಘಟನೆ ಪ್ರಜಾಪ್ರಭುತ್ವದ ಮೇಲೆ ನಡೆಸಿದ ದಾಳಿ ಎಂದೇ ಹೇಳಬಹುದು. ನ್ಯಾಯಾಮೂರ್ತಿ ಬಿ.ಆರ್ ಗವಾಯಿಯವರು ಧಮ್ಮ ಮಾರ್ಗದಲ್ಲಿ ನಡೆಯುತ್ತಿರುವ ಡಾ. ಅಂಬೇಡ್ಕರ್ ಅನುಯಾಯಿಯಾಗಿದ್ದಾರೆ. ಇದನ್ನು ಮನುವಾದಿ ಮನಸ್ಥೀತಿಯ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗದೇ ಅವರ ಮೇಲೆ ಶೂ ಎಸೆದಿದ್ದಾರೆ. ಕೂಡಲೇ ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಮಾದಿಗ ಸಮಾಜದ ಮುಖಂಡರಾದ ರುದ್ರಪ್ಪ ಹುಲಿಮನಿ ಹೇಳಿದರು. ಇದನ್ನೂ ಓದಿ: ಸರ್ಕಾರದ ಬೇಜವಾಬ್ದಾರಿತನದಿಂದ ಪ್ರತಿಷ್ಠಿತ ಕಂಪನಿ ಕೈತಪ್ಪಿದೆ: ಬೊಮ್ಮಾಯಿ

ಈ ಸಂದರ್ಭದಲ್ಲಿ ಶಾಂತಪ್ಪ ಗುತ್ತೇದಾರ, ವಾಸುದೇವ ಕಟ್ಟಿಮನಿ, ವೆಂಕಟೇಶ ಆಲೂರ, ಸೋಪಣ್ಣ ದರಿಯಾಪುರ, ಸಿದ್ದಪ್ಪ ದೇವರಗೋನಾಲ, ಮಲ್ಲಣ್ಣ ಉಳ್ಳಂಡಗೇರ, ಮಾನಪ್ಪ ವಠಾರ, ಶಿವುಕುಮಾರ ದೊಡ್ಮನಿ, ವಿಜಯಕುಮಾರ ಎದುರಮನಿ, ಶರಣಪ್ಪ ಕ್ಯಾತನಾಳ, ಬಸವರಾಜ ನಾಯ್ಕಲ್, ಪರಶುರಾಮ ಮಹಲರೋಜಾ, ಲಕ್ಷö್ಮಣ ಶೇಟ್ಟಿಕೇರ, ಭೀಮರಾಯ ಕಾಂಗ್ರೆಸ್, ರವಿ ಎದುರುಮನಿ, ಗುರು ದೊಡ್ಮನಿ, ಭೀಮರಾಯ ಕರಕಳ್ಳಿ, ರವಿಚಂದ್ರ ಕಾಂಗ್ರೆಸ್, ಈರಪ್ಪ ದೊಡ್ಮನಿ, ಬಸವರಾಜ ಕಣೆಕಲ್, ಮೋಹನರಾಜ ಕನ್ಯಾಕೊಳೂರ, ದೇವಿಂದ್ರಪ್ಪ ಕನ್ಯೆಕೊಳ್ಳೂರ, ನಾಗರಾಜ ಹುಲಿಮನಿ, ಧರ್ಮಣ್ಣ ನಾಟೇಕರ, ಪ್ರದೀಪ ಅಣಬಿ, ಶಿವು ಶಿರವಾಳ, ಮಲ್ಲಣ್ಣ, ಶಿವುಕುಮಾರ ಭೀಗುಡಿ, ಶಿವರೆಡ್ಡಿ ಗುಂಡಗುರ್ತಿ ,ಯಮನಪ್ಪ ರೇವಲ್, ಸೇರಿದಂತೆ ಇತರರು ಇದ್ದರು.

 

About the Author

Praja Vahini

Editor

View All Posts

Spread the love

Post navigation

Previous: ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಹಾನ ಸಯ್ಯದ್
Next: ಟಿಸಿಪಾಳ್ಯ; ವೆಂಗಯ್ಯ ಪಾರ್ಕ್‌ಗೆ ಡಿಕೆಶಿ ಭೇಟಿ

Views:

150

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.