ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಚಿನ್ನ ಕರೆದಿಗಾರರು ಕಂಗಾಲಾಗಿದ್ದಾರೆ.
ಹೌದು, ಕಳೆದ ಒಂದು ವರ್ಷದಿಂದ ಚಿನ್ನ ಹಾಗೂ ಬೆಳ್ಳಿಯ ದರ ಗಗನಕ್ಕೆ ಏರುತ್ತಿರುವುದರಿಂದ ಬಡವರು ಚಿನ್ನ ಕರೀದಿಯ ಕನಸು ಕನಸಾಗಿಯೇ ಉಳಿಯುತ್ತೇನೋ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 1 ವರ್ಷದಲ್ಲಿ 65% ರಷ್ಟು ದರ ಏರಿಕೆ ಆಗಿದ್ದರೂ ಸಹ ಚಿನ್ನದ ಮೇಲೆ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇನ್ನು ಬೆಳ್ಳಿ 1 ವರ್ಷದಲ್ಲಿ 75% ಏರಿಕೆಯಾಗಿದೆ. ಹಿಂದಿನ ಯಾವ ವರ್ಷಗಳಲ್ಲೂ ಆಗದ ಬೆಲೆ ಏರಿಕೆ ಕಳೆದ ಅಕ್ಟೋಬರ್ನಿಂದ ಈ ವರ್ಷ ಅಕ್ಟೋಬರ್ನಲ್ಲಿ ಆಗಿದೆ. ದೀಪಾವಳಿ ಹಾಗೂ ಈಗಾಗಲೇ ಮದುವೆ ಸೀಜನ್ ಆರಂಭವಾಗಿದ್ದು, ಮಧ್ಯಮ ವರ್ಗ ಹಾಗೂ ಬಡವರ್ಗದ ಮಹಿಳೆಯರಿಗೆ ಬಂಗಾರ ಕೊಳ್ಳಂಗಿಲ್ಲ, ಮುಟ್ಟಂಗಿಲ್ಲ ಎನ್ನುವಂತಾಗಿದೆ. ಇದನ್ನೂ ಓದಿ: ಬಿಹಾರದ ಮಹಾಯುದ್ಧದಲ್ಲಿ ಗೆಲ್ಲೋರು ಯಾರು?
24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ರೂ. ಆಗಿದ್ರು, ಬೆಳ್ಳಿ ಕೆ.ಜಿಗೆ 1,60,000 ರೂ. ಆಗಿದೆ. ಪ್ರಮುಖವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರೋದು, ವಿವಿಧ ದೇಶದ ಬ್ಯಾಂಕ್ಗಳು ಚಿನ್ನ ಕೊಳ್ಳುತ್ತಿರೋದು, ಟ್ರಂಪ್ನ ಟಾರಿಫ್ ನೀತಿ ಮೊದಲಾದ ಕಾರಣಗಳಿಂದ ಚಿನ್ನ, ಬೆಳ್ಳಿ ಏರಿಕೆಯಾಗ್ತಿದೆ.
