ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಸೌಲಭ್ಯವಿಲ್ಲದೆ ಪರಿತಪಿಸುತ್ತಿದ್ದಾರೆ.
ನಿನ್ನೆ (ಅ.09) ಮೂಲಸೌಕರ್ಯ ಬೇಕೆಂದು ಅರ್ಜಿ ಸಲ್ಲಿಸಿದ್ದ ದರ್ಶನ್ ಅವರ ವಿಚಾರಣೆ ನಡೆದಿದ್ದು, ಯಾವುದೇ ಮೂಲ ಸೌಕರ್ಯವಿಲ್ಲ ಬೇಕಾದರೆ ನೀವೇ ಬಂದು ನೋಡಿ ಎಂದು ನಟ ದರ್ಶನ್ ಜಡ್ಜ್ಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ನ್ಯಾಯಾಧೀಶರೇ ಖುದ್ದು ಪರಿಶೀಲಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು (ಅ.10) ಕ್ಕೆ ಮುಂದೂಡಲಾಗಿದೆ.
ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದ ಮಂಡಿಸಿ, ನಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಪದೇ ಪದೇ ಅರ್ಜಿ ಹಾಕುತ್ತಿದ್ದೇವೆ. ಈ ಬಗ್ಗೆ ಜಡ್ಜ್ ಪರಿಶೀಲನೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಎಸ್ಪಿಪಿ, ಅರ್ಜಿಯೇ ಊರ್ಜಿತವಲ್ಲ. ಯೋಗ್ಯವಲ್ಲದ ಅರ್ಜಿ ಇದು, ವಜಾ ಮಾಡುವಂತೆ ಮನವಿ ಮಾಡಿದರು. ಇದು ಟ್ರಯಲ್ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಆರೋಪಿಸಿದರು. ಇದನ್ನೂ ಓದಿ: ಜೈಲಲ್ಲಿ ರೇಪಿಸ್ಟ್ ಗಳಿಗೆ ವಿಐಪಿ ಸೌಲಭ್ಯ ಕೊಡ್ತಾರೆ ಆದ್ರೆ ದರ್ಶನಗೆ ಏನೂ ಇಲ್ಲ!
ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆ ಸಂಬಂಧ, ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಮೂವರು ಆರೋಪಿಗಳು ಗೈರು ಹಾಜರಾಗಿದ್ದರಿಂದ ಅರ್ಜಿಯ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿಕೆ ಮಾಡಲಾಗಿದೆ.
