Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸಿಎಂ ಕುರ್ಚಿಗೆ ಕುತ್ತು ನೀಲಕಂಠೇಶ್ವರ ಸ್ವಾಮಿ ಭವಿಷ್ಯ
  • Bangalore
  • Bangalore
  • Front news
  • Politics
  • State

ಸಿಎಂ ಕುರ್ಚಿಗೆ ಕುತ್ತು ನೀಲಕಂಠೇಶ್ವರ ಸ್ವಾಮಿ ಭವಿಷ್ಯ

Praja Vahini October 7, 2025 1 minute read
WhatsApp Image 2025-10-07 at 12.30.44
Spread the love

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದ್ದು, ಇದೀಗ ಅಚ್ಚರಿ ಮೂಡಿಸುವಂತೆ ನೀಲಕಂಠೇಶ್ವರ ಸ್ವಾಮೀಜಿ ಭವಿಷ್ಯ ನುಡಿದು ಎಲ್ಲರ ನಿದ್ದೆಗೆಡಿಸಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕವಿದೆ ಎಂದು ನೀಲಕಂಠೇಶ್ವರ ಸ್ವಾಮೀಜಿ ಅವರ ಭವಿಷ್ಯ ನುಡಿದಿರುವುದು ಇದೀಗ ರಾಜ್ಯ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿದೆ. ಈಗಾಗಲೇ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಇಳಿಯಲಿದ್ದಾರೆ ಎಂದು ಅದೆಷ್ಟೋ ಗಾಳಿ ಸುದ್ದಿ ಹಬ್ಬುತ್ತಿರುವ ಬೆನ್ನಲ್ಲೇ ಇದೀಗ ನೀಲಕಂಠೇಶ್ವರ ಸ್ವಾಮೀಜಿಯವರ ಭವಿಷ್ಯ ನಿಜ ಆಗುತ್ತಾ ಎಂದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಒಂದು ಕಡೆ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸಭೆಗಳಲ್ಲಿ ಹೇಳುತ್ತಾರೆ. ಆದರೆ ಕಾಂಗ್ರೆಸ್ ನ ಕೆಲ ಸಚಿವರೇ ನವಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂದು ಹೇಳಿಕೆ ನೀಡುತ್ತಾರೆ. ಇದೆಲ್ಲದರ ಮಧ್ಯ ಇದೀಗ ನೀಲಕಂಠೇಶ್ವರ ಸ್ವಾಮೀಜಿಯವರ ಭವಿಷ್ಯ ನುಡಿದಿರುವುದಂತೂ ಅಚ್ಚರಿ ಮೂಡಿಸಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕುತ್ತಿದೆ ಎಂದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ವಿ.ಸೋಮಣ್ಣ ಸಮಸಮಾಜದ ವಿರೋಧಿ: ಸಿಎಂ

ಈ ಕುರಿತು ಹೇಳಿಕೆಯನ್ನು ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ಸಂತೋಷದ ಸಂಗತಿ. ಆದರೆ ಇನ್ನೊಂದು ಕಡೆ ದುಃಖದ ಸಂಗತಿ ಕೂಡ ಎದ್ದು ಕಾಣುತ್ತಿದೆ. 2018ರಲ್ಲಿ ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ಮಾಡಲು ಹೋಗಿ ಒಂದುಗೂಡಿರುವಂತಹ ಸಮಾಜವನ್ನು ಇಬ್ಬಾಗ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ಹಾಕಿ ಕೈ ಸುಟ್ಟಿಕೊಂಡಿರುವಂತ ಅವರು, ಮತ್ತೆ ಇದೀಗ ಜೇನುಗೂಡಿಗೆ ಕೈ ಹಾಕಿ ಜೇನು ಹುಳುಗಳಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೋಗಬೇಡ ಎಂದು ನಾವು ಈ ಮುಂಚೆ ಹೇಳಿದ್ದೆವು. ಆದರೂ ಕೂಡ ಅವರು ಆ ಕಾರ್ಯಕ್ರಮಕ್ಕೆ ಹೋಗಿದ್ದರು.

ಆ ಕಾರ್ಯಕ್ರಮದಲ್ಲಿ ಧರ್ಮದ ಬಗ್ಗೆ ಹೇಳಿಕೆ ನೀಡದೇ ಜಾಣ ನಡೆ ಅನುಸರಿಸಿದ್ದಾರೆ. ಆದರೂ ಸಹ ಆ ಸಭೆಗೆ ಹೋಗಿದ್ದರಿಂದ ಸರ್ಕಾರಕ್ಕೆ ಸ್ವಲ್ಫ ಗೊಂದಲ ಉಂಟಾಗಿದೆ ಎಂದಿದ್ದಾರೆ.

ನವೆಂಬರ್​ನಲ್ಲಿ ಸಿದ್ದರಾಮಯ್ಯನವರಿಗೆ ಕುತ್ತು ಬರುತ್ತದೆಯೇನೋ ಎಂದು ನಮಗೆ ಎನಿಸುತ್ತಿದೆ. ಮೊನ್ನೆಯೇ ಸಿದ್ದರಾಮಯ್ಯನವರಿಗೆ ಆ ಸಭೆಗೆ ಹೋದರೆ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಅಂತ ಹೇಳಿದ್ದೆವು. ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತರೆಲ್ಲಾ ಒಂದು ಎನ್ನುವುದನ್ನು ಹೇಳುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಇಬ್ಭಾಗ ಮಾಡುವುದು ಬಿಟ್ಟು ಒಂದು ಮಾಡಿದ್ರೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ನಟಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಕಲಿ ನಿರ್ಮಾಪಕ ಅರೆಸ್ಟ್
Next: ಮಹರ್ಷಿ ವಾಲ್ಮೀಕಿಯವರು ದೇಶ ಕಂಡ ಅಪರೂಪದ ಸಾಹಿತಿ: ಸಿಎಂ

Views:

34

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.