Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೀಸಲಾತಿ ಹಾಗೂ ಸೌಲಭ್ಯಗಳು ಎಲ್ಲರಿಗೂ ದೊರಕಿಸಲು ಸಮೀಕ್ಷೆ: ಡಿ.ಕೆ.ಸುರೇಶ್
  • Bangalore
  • Front news
  • Politics
  • State

ಮೀಸಲಾತಿ ಹಾಗೂ ಸೌಲಭ್ಯಗಳು ಎಲ್ಲರಿಗೂ ದೊರಕಿಸಲು ಸಮೀಕ್ಷೆ: ಡಿ.ಕೆ.ಸುರೇಶ್

Praja Vahini September 30, 2025 1 minute read
WhatsApp Image 2025-09-30 at 11.47.10
Spread the love

ಬೆಂಗಳೂರು: ಮೀಸಲಾತಿ ಹಾಗೂ ಎಲ್ಲಾ ಸೌಲಭ್ಯಗಳು ಕೇವಲ ಸಿಕ್ಕವರಿಗೇ ಸಿಗಬಾರದು. ಇದನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಹೇಳಿದರು.

ಸದಾಶಿವನಗರದ ನಿವಾಸದಲ್ಲಿ (ಸೋಮವಾರ ಸೆ.29) ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಗಮನಿಸುತ್ತಿರುವುದು ಸೌಲಭ್ಯ ಇಲ್ಲದವರ ಸ್ಥಿತಿಗತಿಯನ್ನು ಮಾತ್ರ. ಇವುಗಳನ್ನು ಸಂಗ್ರಹಿಸಿ ಅವರನ್ನು ಮೇಲಕ್ಕೆತ್ತಲು ಯಾವ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು ಎಂಬುದಾಗಿ ಆಲೋಚನೆ ಮಾಡಲಾಗುತ್ತದೆ. ಸಮೀಕ್ಷೆಯಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಗ್ರಾಮೀಣ ಹಾಗೂ ನಗರ ಭಾಗದ ಜನರು ಇದರಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಸಮೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಗೊಂದಲ ಮಾಡುತ್ತಿದ್ದಾರೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ಎಂದು ಸ್ಪಷ್ಟಪಡಿಸಿದರು.

ಆಯೋಗ ಕೇಳಿರುವ ಎಲ್ಲಾ ಮಾಹಿತಿಗಳಿಗೆ ಉತ್ತರಿಸಬೇಕು ಎನ್ನುವುದು ಕಡ್ಡಾಯವಲ್ಲ. ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಸಮಂಜಸವಲ್ಲದ ಪ್ರಶ್ನೆಗಳಿಗೆ ಉತ್ತರಿಸಬಹುದು, ಇರದೆಯೂ ಇರಬಹುದು ಎಂದು ಹೇಳಲಾಗಿದೆ. ಎಂದರು.

ಬಡವರೋ ಅಥವಾ ಬಲ್ಲಿದರೋ ಎಂದು ತಿಳಿಯಲು ಈ ರೀತಿ ಮಾಡಲಾಗಿದೆ. ಚಿನ್ನ ಎಂಬುದು ಬಡವರಿಗೆ ಕನಸಿನ ಮಾತು. ಚಿನ್ನ ಇಟ್ಟಿರುವವರು ಇದರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಹೊರತು. ಇಲ್ಲದವರು ಸುಮ್ಮನೆ ಇದ್ದಾರೆ. ಎಂದರು.

ಹಿಂದೂ ಜಾತಿ ಎಂದೇ ಕರೆ ನೀಡಲಿ

ಕೇಂದ್ರ ಸರ್ಕಾರವೂ ಜಾತಿಗಣತಿ ನಡೆಸುತ್ತೇವೆ ಎಂದು ಕರೆ ನೀಡಿದೆ. ಸಿ.ಟಿ.ರವಿ, ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ನಾವು ಹಿಂದೂ ಜಾತಿಗೆ ಸೇರಿದವರು ಎಂದು ಅವರ ಕಾರ್ಯಕರ್ತರಿಗೆ ಕರೆ ನೀಡಲಿ. ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದಾದರೆ ʼಹಿಂದೂʼ ಎಂದೇ ಬರೆಸಲು ಅಭಿಯಾನ ನಡೆಸಲಿ, ಒತ್ತಾಯ ಮಾಡಲಿ” ಎಂದರು.

ಜಾತಿ, ಧರ್ಮ ಒಡೆಯಲಾಗುತ್ತಿದೆ ಎಂದು ಪದೇ, ಪದೇ ಆರೋಪ ಮಾಡುತ್ತಿದ್ದಾರಲ್ಲವೇ? ಹಾಗಾದರೆ ನಾವು ಭಾರತೀಯರು, ಹಿಂದುಗಳು ಮಾತ್ರ ಎಂದು ಹೇಳಲಿ. ಸಮೀಕ್ಷೆಯನ್ನು ವಿರೋಧ ಮಾಡುತ್ತಿರುವವರು ಹಳ್ಳಿ, ಹಳ್ಳಿಗೆ ಹೋಗಿ ಈ ಅಭಿಯಾನ ನಡೆಸಲಿ ಎಂದರು. ಇದನ್ನೂ ಓದಿ:  ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈಗ ಅದಕ್ಕೆ ಹೊಂದಿಕೊಳ್ಳಲಾಗುತ್ತಿದೆ. ಸಮೀಕ್ಷೆಯೂ ಅನೇಕ ಕಡೆ ಈಗ ವೇಗ ಪಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಬೇಗ ಮುಗಿಯುತ್ತದೆ. ಆದರೆ ನಗರ ಭಾಗದಲ್ಲಿ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಇದರ ಬಗ್ಗೆ ಸರ್ಕಾರ ಅಥವಾ ಆಯೋಗ ತೀರ್ಮಾನ ಮಾಡುತ್ತದೆ ಎಂದರು.

 

About the Author

Praja Vahini

Editor

View All Posts

Spread the love

Post navigation

Previous: ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ
Next: ರಾಜ್ಯ ಸರ್ಕಾರದಿಂದ ವಯೋಮಿತಿ ಸಡಿಲಿಕೆಯಲ್ಲಿ ಮಹತ್ವದ ನಿರ್ಧಾರ!

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.