Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಸ್ತೆ ಗುಂಡಿಗಳಿಗೆ ಪ್ರಮುಖ ಕಾರಣವೇ ಹಿಂದಿನ ಬಿಜೆಪಿ ಸರ್ಕಾರ: ರಾಮಲಿಂಗಾ ರೆಡ್ಡಿ
  • Bangalore
  • Politics
  • State

ರಸ್ತೆ ಗುಂಡಿಗಳಿಗೆ ಪ್ರಮುಖ ಕಾರಣವೇ ಹಿಂದಿನ ಬಿಜೆಪಿ ಸರ್ಕಾರ: ರಾಮಲಿಂಗಾ ರೆಡ್ಡಿ

Praja Vahini September 27, 2025 1 minute read
WhatsApp Image 2025-09-27 at 12.53.42
Spread the love

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ರಸ್ತೆಗಳೆಲ್ಲ ಗುಂಡಿ ಬಿದ್ದು ಅದೆಷ್ಟೋ ಅನಾಹುತಗಳಾದರೂ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

ಇನ್ನು ಬಿಜೆಪಿಯವರು ಆರೋಪ ಮಾಡುತ್ತಿದ್ದಂತೆ ಇದೀಗ ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿಯವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿರುವ ರಸ್ತೆಗಳು ಹದಗೆಡಲು ಹಿಂದೆ ಇದ್ದ ಬಿಜೆಪಿ ಸರ್ಕಾರವೇ ಇದಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.

ನಿನ್ನೆ (ಶುಕ್ರವಾರ ಸೆ. 26) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ರಸ್ತೆಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ರಸ್ತೆಗಳ ನಿರ್ವಹಣೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದೆ. ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜವಾಬ್ದಾರಿಯಾಗಿದೆ. ಗುಂಡಿಗಳನ್ನು ಮುಚ್ಚುವುದು ನಿಯಮಿತ ಪ್ರಕ್ರಿಯೆಯಾಗಿದ್ದು, ಆಡಳಿತ ಸರ್ಕಾರದ ಮೇಲೆ ಆರೋಪ ಹೊರಿಸಲಾಗುತ್ತಿದೆ.

ನಗರದಲ್ಲಿ ಗುಂಡಿಗಳು ಇಲ್ಲ ಎಂದು ನಾನು ಹೇಳುವುದಿಲ್ಲ. ಮಳೆಗಾಲದಲ್ಲಿ ಸಹಜವಾಗಿ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತವೆ. ಆದರೆ. ಅದನ್ನು ಸರಿಪಡಿಸುವ ಜವಾಬ್ದಾರಿ ಪಾಲಿಕೆ ಮತ್ತು ಸರ್ಕಾರದ್ದೇ ಆಗಿರುತ್ತದೆ. ಬಿಜೆಪಿ ಆಡಳಿತಾವಧಿಯಲ್ಲೇ ಲಕ್ಷಗಟ್ಟಲೆ ಗುಂಡಿಗಳು ನಗರದಲ್ಲಿ ಕಂಡುಬಂದಿದ್ದವು. ಈ ‌ಹಿಂದೆ ಗುಂಡಿಗಳಿಂದ 17 ಜನ ಸಾವನ್ನಪ್ಪಿದ್ದರು. ಆಗ ನಾವೇ ಟೀಕೆ ಮಾಡಿದ್ದೆವು. ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೇ ಗುಂಡಿಗಳು ಇತ್ತು. ಆಗ ಆಯುಕ್ತರು ತುಷಾರ್ ಗಿರಿನಾಥ್ ಇದ್ದರು. ಅವರನ್ನು ಪ್ರತಿನಿತ್ಯ ಯಾವಾಗ ಎಷ್ಟು ಗುಂಡಿ ಮುಚ್ಚುತ್ತಿರಾ ಎಂದು ಕೇಳಲಾಗುತ್ತಿತ್ತು. ಇದನ್ನೂ ಓದಿ: HSR ಲೇಔಟ್‌ನಲ್ಲಿ NAMO ರನ್ ಗೆ ಚಾಲನೆ ನೀಡಿದ ತೇಜಸ್ವಿ ಸೂರ್ಯ

ಬಿಜೆಪಿ ಅವಧಿಯಲ್ಲಿ 6116 ಕೋಟಿ ಅನುದಾನ ಕೊಡಲಾಗಿತ್ತು. ಅವರು ರಸ್ತೆಗಳಿಗೆ 3346 ಕೋಟಿಗಳನ್ನು ತೆಗೆದುಕೊಂಡಿದ್ರು.ಅಂದು ನಮ್ಮ ಶಾಸಕರಿಗೆ 682 ಕೋಟಿ ಕೊಟ್ಟಿದ್ದರು. ಅವರು ಅಷ್ಟೊಂದು ಹಣ ತೆಗೆದುಕೊಂಡಿದ್ದರೂ ಗುಂಡಿಗಳು ಯಾಕೆ ಬಿತ್ತು? ನಮ್ಮ ಸರ್ಕಾರ ಗುಂಡಿಗಳನ್ನು ಮುಚ್ಚಲು ಎಲ್ಲ ಪ್ರಯತ್ನ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

 

About the Author

Praja Vahini

Editor

View All Posts

Spread the love

Post navigation

Previous: HSR ಲೇಔಟ್‌ನಲ್ಲಿ NAMO ರನ್ ಗೆ ಚಾಲನೆ ನೀಡಿದ ತೇಜಸ್ವಿ ಸೂರ್ಯ
Next: ಉಪೇಂದ್ರ, ಪ್ರಿಯಾಂಕ ಮೊಬೈಲ್ ಹ್ಯಾಕ್; ಕೊನೆಗೂ ಆರೋಪಿಗಳು ಯಾರೆಂದು ಪತ್ತೆ ಹಚ್ಚಿದ ಪೊಲೀಸರು

Views:

24

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.