ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಕುರುಬ ಸಮುದಾಯದ ಬಗ್ಗೆ ಭಾರಿ ಗ್ರಾಸವಾಗಿ ಚರ್ಚೆಯಾಗುತ್ತಿದ್ದು, ಚಲವಾದಿ ನಾರಾಯಣಸ್ವಾಮಿ ಅವರು ಎಫ್ ಐ ಆರ್ ದಾಖಲಾಗಿದೆ
ಹೌದು,ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ FIR ದಾಖಲಾಗಿದೆ. ಕುರುಬರ ST ಮೀಸಲಾತಿಯ ಬಗ್ಗೆ ಮಾತಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕುರುಬ ಸಮುದಾಯದ ಮುಖಂಡ ಸಿದ್ದಣ್ಣ ತೇಜಿ ದೂರು ಆಧರಿಸಿ ಇದೀಗ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ
ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ ಹಿನ್ನೆಲೆ BNS 353(2) ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಬೆಳಗ್ಗೆ ಕುರುಬ ಸಮುದಾಯದಿಂದ ಡಿಜಿ & ಐಜಿಪಿಗೆ ದೂರು ನೀಡಲಾಗಿತ್ತು. ಸದ್ಯ ಡಿಜಿ &ಐಜಿಪಿ ಸೂಚನೆ ಮೇರೆಗೆ FIR ದಾಖಲಾಗಿದೆ.
