Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • 28 ಹೊರ ಗುತ್ತಿಗೆ ದಿನಗೂಲಿ ನೌಕರರನ್ನು ಮರು ನೇಮಕ ಮಾಡಿ
  • State

28 ಹೊರ ಗುತ್ತಿಗೆ ದಿನಗೂಲಿ ನೌಕರರನ್ನು ಮರು ನೇಮಕ ಮಾಡಿ

Praja Vahini September 19, 2025 1 minute read
WhatsApp Image 2025-09-19 at 07.02.25
Spread the love

ಶಹಾಪುರ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರ ಅವರ ಸ್ವಾಧೀನದಲ್ಲಿರುವ ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿಯಲ್ಲಿ 20 ವರ್ಷಗಳ ಮೇಲ್ಪಟ್ಟು ದಕ್ಷತೆಯಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ 28 ಪುರುಷ ಹಾಗೂ ಮಹಿಳಾ ಹೊರ ಗುತ್ತಿಗೆ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆದಿದ್ದು ಖಂಡನೀಯ, ಇದೊಂದು ಕಾಯ್ದೆ ಬಾಹಿರವಾಗಿದ್ದು, ಕೂಡಲೇ 28 ಜನ ಹೊರಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಕ.ರಾ.ಸ.ಸಿ.ನೌ.ಮ.ಮ ಹುಬ್ಬಳಿ ವಲಯ ಸಂಚಾಲಕ ವ್ಹಿ.ಜಿ ಅಂಗಡಿ ಆಗ್ರಹಿಸಿದರು.
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಎದುರುಗಡೆ ಕರ್ನಾಟಕ ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಳಿ ವತಿಯಿಂದ ಅಹೋರಾತ್ರಿ ಅನಿರ್ಧಿಷ್ಟವಧಿಯ ಉಪವಾಸ ಸತ್ಯಾಗ್ರಹ ನಡೆಸಿ ಮಾತನಾಡಿ ನ್ಯಾಯದ ಉಲ್ಲಂಘನೆಯಾಗಿದ್ದು, ಸಂವಿಧಾನದ ವಿಧಿ -39 (ಡಿ)ಮೂಲಭೂತ ಹಕ್ಕಿನನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ಪಡೆದುಕೊಳ್ಳಲು ಸಂಪೂರ್ಣ ಹಕ್ಕು ನೌಕರರಿಗಿದೆ. ಸಂವಿಧಾನ ವಿಧಿ ನಿಯಮ ೧೪೧ರ ಪ್ರಕಾರ ಮತ್ತು 14, 16 ಹಾಗೂ 21ರ ಪ್ರಕಾರ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಗುತ್ತಿಗೆ ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಏಕಾಏಕಿ ನೌಕರರನ್ನು ಕೆಲಸದಿಂದ ತೆಗೆದುಹಾಕಿರುವ ಕ್ರಮ ಸರಿಯಲ್ಲಾ.
ಅನ್ಯಾಯಕ್ಕೊಳಗಾಗಿರುವ ಈ ಬಡ ನೌಕರರಿಗೆ ಕೂಡಲೇ ನ್ಯಾಯ ಕೊಡಿಸಬೇಕು ಹಾಗೂ ಕಾರ್ಮಿಕ ಕಾನೂನುಗಳಲ್ಲಿ ಉಲ್ಲಂಘಿಸಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ೨೮ ನೌಕರರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು.
ಸರ್ಕಾರದ ನಿಯಮದ ಪ್ರಕಾರ ಕನಿಷ್ಠ ವೇತನ ನೀಡಬೇಕು. ಸರ್ಕಾರಿ ಸೇವೆಯಲ್ಲಿ ಸೇವಾ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ನೌಕರರ ಪ್ರತಿಭಟನೆಗೆ ವಿವಿಧ ರೈತ ಸಂಘಗಳ ಮುಖಂಡರು ಸಾಥ್ ನೀಡಿದರು. ಭೇಡಿಕೆ ಈಡೇರುವ ವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೋರಾಟಗಾರರು ತಿಳಿಸಿದರು.
ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ
ದುಡಿಮೆ ತಕ್ಕಂತೆ ಸಂಬಳವೂ ಇಲ್ಲ, ಸೌಲಭ್ಯಗಳು ಇಲ್ಲದೆ ಅನೇಕ ವರ್ಷಗಳಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಕೆಲಸದಿಂದ ತೆಗೆದು ಹಾಕುತ್ತಾರೆಂಬ ಭಯದಿಂದ ಕೊಟ್ಟಿದ್ದನ್ನು ತೆಗೆದುಕೊಂಡು ಹೋಗುವಂತಹ ಪರಿಸ್ಥೀತಿ ನೌಕರರಿಗಿದೆ. ಸರ್ಕಾರದ ಅಧಿಕಾರಿಗಳಿಂದ ಹಿಡಿದು ಹೊರಗುತ್ತಿಗೆ ಏಜೆನ್ಸಿಗಳ ತನಕ ಕಮೀಷನ್ ದಂಧೆ ಇರುವುದರಿಂದ ಹೊರ ಗುತ್ತಿಗೆ ನೌಕರರ ಸಂಬಳವನ್ನು ಕಡಿತಗೊಳಿಸಿ ದುಡಿಮೆಗೆ ತಕ್ಕ ರೀತಿಯಲ್ಲಿ ಹಣ ನೀಡುತ್ತಿಲ್ಲ. ಇದರ ತಪ್ಪು ಸರ್ಕಾರದ್ದೆ ಆಗಿದೆ. ಕೂಡಲೇ 28 ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ವ್ಹಿ.ಜಿ ಅಂಗಡಿ ವಲಯ ಸಂಚಾಲಕರು. ಕ.ರಾ.ಸ.ದಿ.ನೌ.ಮ.ಮ ಹುಬ್ಬಳ್ಳಿ ಹೇಳಿದರು.
ದುಡಿಮೆ ತಕ್ಕಂತೆ ಸಂಬಳವೂ ಇಲ್ಲ
ಸರ್ಕಾರದ ಆದೇಶದನ್ವಯ ತಮ್ಮ ಅಧೀನದಲ್ಲಿ ಇಲಾಖೆ ಸೇವೆಯಲ್ಲಿ ಮುಂದುವರೆದಿರುವ ಎಲ್ಲಾ ದಿನಗೂಲಿ ನೌಕರರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಂದಿಗೆ ದುಡಿಮೆಯ ವೇತನ ಕಲ್ಪಿಸಬೇಕು. ದುಡಿಮೆ ತಕ್ಕಂತೆ ಸಂಬಳವೂ ಇಲ್ಲ ಸೌಲಭ್ಯಗಳು ಇಲ್ಲದೆ ಅನೇಕ ವರ್ಷಗಳಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಜೀವನೋಪಾಯಕ್ಕಾಗಿ ಯಾವುದೇ ರೀತಿಯ ತೊಂದರೆ ನೀಡಿದರೂ ವಿಧಿಯಿಲ್ಲದೆ ಅನುಭವಿಸಿಕೊಂಡು ದುಡಿಯಬೇಕಾದ ಪರಿಸ್ಥಿತಿಯು ಇದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷರಾದಚನ್ನಪ್ಪ ಆನೇಗುಂದಿ ಹೇಳಿದರು.

ಈ ಸಂದರ್ಭದಲ್ಲಿ ಅರವಿಂದ ಬೂದಿಹಾಳ, ಖಾದರಶಾಬ್ ದರ್ಗಾ , ದೇವೆಂದ್ರ ಭೀಗುಡಿ, ಬಸವರಾಜ ಕಾವಲುಗಾರ, ರಾಜು ಜಾಲಹಳ್ಳಿ, ಸೌಲತ್ ಪವಾರ್, ಶ್ರೀಮತಿ ಅಂಬ್ರಮ್ಮ , ಮಾನಿಬಾಯಿ, ಲಲಿತಾಬಾಯಿ, ಜಯಶ್ರೀ, ಉಮಾಶ್ರೀ, ಬಸಮ್ಮ, ಅನುಸಮ್ಮ, ಭೀಮಬಾಯಿ, ರಾಜುಗೌಡ ಕಂಚನಕವಿ, ವಿನೋಧ, ಶಿವು, ಬೀಮರಾಯ, ಬಸನಗೌಡ, ಶಂಕರ, ಸಂತೋಷ, ಬಣ್ಣಮ್ಮ ಅನಿಲ್‌ರೆಡ್ಡಿ, ಆಸಿಫ್, ನೀಲಮ್ಮ , ಲಕ್ಷ್ಮೀಬಾಯಿ, ಬಸಲಿಂಗಪ್ಪ ದೊರೆ, ಶಾರಿಬಾಯಿ ರಾಠೋಡ, ಅಯ್ಯಮ್ಮ ನಾಟೇಕಾರ, ಅನಿತಾ ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಇಡೀ ದೇಶದಲ್ಲಿ ವೋಟ್ ಚೋರಿ ಆಗಿದೆ: ರಾಮಲಿಂಗಾರೆಡ್ಡಿ
Next: ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ: ಸಿಎಂ

Views:

35

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.