Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬ್ಯಾಲೆಟ್‌ ಎನ್ನುವುದು ಬುಲೆಟ್‌ಗಿಂತ ಶಕ್ತಿಶಾಲಿ: ಡಿಕೆಶಿ
  • Bangalore
  • Front news
  • Politics

ಬ್ಯಾಲೆಟ್‌ ಎನ್ನುವುದು ಬುಲೆಟ್‌ಗಿಂತ ಶಕ್ತಿಶಾಲಿ: ಡಿಕೆಶಿ

Praja Vahini September 15, 2025
WhatsApp Image 2025-09-15 at 16.32.22
Spread the love

ಬೆಂಗಳೂರು: ನಾವೆಲ್ಲರೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ನಮ್ಮದು ಇಡೀ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಬಸವಣ್ಣನವರ ನಾಡಿನಲ್ಲಿ ನಾವಿದ್ದೇವೆ. ಬಸವಣ್ಣನವರು ಅನುಭವ ಮಂಟಪ ಮಾಡಿ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ವ್ಯವಸ್ಥೆಯನ್ನು ಮಾಡಿದರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ಯಾಲೆಟ್‌ ಎನ್ನುವುದು ಬುಲೆಟ್‌ಗಿಂತ ಶಕ್ತಿಶಾಲಿ. ನಾವೆಲ್ಲರೂ ಬ್ಯಾಲೆಟ್‌ ಕಾಲಘಟ್ಟದಲ್ಲೇ ಹುಟ್ಟಿದವರು. ಬ್ಯಾಲೆಟ್‌ ನಮಗೆ ಶಕ್ತಿ ಕೊಟ್ಟಿದೆ. ಜನರು ವೋಟ್‌ ಹಾಕಿದ್ದಕ್ಕೆ ನಾವು ಶಾಸಕರು, ಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಾಗಿ ನಿಮ್ಮ ಮುಂದೆ ಇದ್ದೇವೆ.

ಪಂಚಾಯತ್‌ಯಿಂದ ಪಾರ್ಲಿಮೆಂಟ್‌ವರೆಗೆ ನಾಯಕರನ್ನು ಬೆಳೆಸುವುದು ನಮ್ಮ ಮೊದಲ ಕರ್ತವ್ಯವಾಗಿದೆ. ನಾಯಕರನ್ನು ಬೆಳೆಸದಿದ್ದರೆ ನಾವು ಯಶಸ್ಸನ್ನು ಕಾಣಲಿಕ್ಕೆ ಸಾಧ್ಯವಿಲ್ಲ. ನಾನು 7ನೇ ಕ್ಲಾಸ್‌ ಅಲ್ಲೇ ಚುನಾವಣೆಗೆ ನಿಂತಿದ್ದೆ. ಆಗ ನನ್ನ ಚಿಹ್ನೆ ನಕ್ಷತ್ರವಾಗಿತ್ತು.  ಅಲ್ಲಿಂದ ಇಲ್ಲಿವರೆಗೆ ನಾನು ಬೆಳೆದಿದ್ದೇನೆ.  ಇದನ್ನೂ ಓದಿ: ಯೆಜ್ಡಿ ಬೈಕ್‌ನಲ್ಲಿ ಸವಾರಿ ಮಾಡಿದ ಡಿಕೆಶಿ

ಯುವ ನಾಯಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಮತದಾನದ ಶಕ್ತಿ ತಿಳಿಸಲು ಪ್ರಜಾಪ್ರಭುತ್ವ ದಿನಾಚರಣೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಬ್ಯಾಲೆಟ್‌ ನಾಯಕರನ್ನು ತಯಾರು ಮಾಡುತ್ತದೆ. 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದ್ದು ರಾಜೀವ್‌ ಗಾಂಧಿಯವರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದಲ್ಲಿ ಅತ್ಯಮೂಲ್ಯವಾಗಿವೆ. ನಿಮ್ಮ ಆಶೀರ್ವಾದದಿಂದ ನಾವು 135 ಸೀಟ್ ಗೆದ್ದಿದ್ದು, ಈ ಮೂಲಕ ನೀವು ದೇಶಕ್ಕೆ ದೊಡ್ಡ ಸಂದೇಶ ನೀಡಿದ್ದೀರಿ.  ಈ ಪ್ರಜಾಪ್ರಭುತ್ವವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಿದೆ ಎಂದರು.

About the Author

Praja Vahini

Editor

View All Posts

Spread the love

Post navigation

Previous: ಹ್ಯಾಕರ್ ಗಳಿಂದ ಹಣ ಕಳೆದುಕೊಂಡ್ರಾ ಪ್ರಿಯಾಂಕಾ ಉಪೇಂದ್ರ ?
Next: ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತಿದೆ: ಸಿಎಂ

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.