ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆ ತಡರಾತ್ರಿ ಭಾರಿ ಮಳೆಯಿಂದಾಗಿ ಹಲವಾರು ಅವಾಂತರಗಳು ಸೃಷ್ಟಿಯಾಗಿದ್ದು, ಇಡೀ ಬೆಂಗಳೂರು ನಗರವೇ ಜಲಾವೃತವಾಗಿದೆ.
ಹೌದು, ನಿನ್ನೆ ರಾತ್ರಿ (ಬುಧವಾರ ಸೆಪ್ಟೆಂಬರ್ 10) ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಬೃಹತ್ ಮರ ಒಂದು ಎರಡು ಮನೆಗಳ ಮೇಲೆ ಬಿದ್ದಿರುವುದರಿಂದ ಮನೆಯಿಂದ ಹೊರಬರಲು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ರಾಜಾಜಿನಗರದ 4ನೇ ಬ್ಲಾಕ್ನಲ್ಲಿ 2 ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್ ಎಂಬುವರ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಪ್ರಾಣಹಾನಿ ಉಂಟಾಗಿಲ್ಲ.
ತೀವ್ರ ಮಳೆ ಗಾಳಿಗೆ ಮರ ಬಿದ್ದು 5 ಕಾರು, ಟಾಟಾ ಏಸ್ ವಾಹನ, 3-4 ಬೈಕ್ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ 2 ಕುಟುಂಬಗಳ ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿದೆ.
