ಲಿಂಗಸುಗೂರು: ಕಲ್ಲು ನಾಗರ ಹಾಲು ಎರೆವರು ದಿಟ್ಟ ನಾಗರ ಕಂಡರೆ ಹೊಡಿ ಹೊಡಿ ಎಂಬುವರು ಎಂಬ ಬಸವಣ್ಣನವರ ವಚನದಂತೆ ನಾಗರ ಪಂಚಮಿ ಎಂದು ಕಲ್ಲು ನಾಗರಕ್ಕೆ ಮಣ್ಣಿನ ಹುತ್ತಕ್ಕೆ ಹಾಲು ಹಾಕುವ ಜನರ ನಡುವೆ ನಿಜನಾಗರ ಬಂದಾಗ ಹೆದರದೆ ಹಾವಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಕೈಮುಗಿದ ಅಪರೂಪದ ಘಟನೆ ತಾಲೂಕಿನ ಜಂಗಿ ರಾಂಪುರ ತಾಂಡದಲ್ಲಿ ನಡೆದಿದೆ.
ಸುನೀಲ್ ಪವಾರ ಎನ್ನುವವರ ಮನೆಯ ಮುಂದೆ ನಿಜನಾಗರ ಕಾಣಿಸಿಕೊಂಡು ಹೆಡೆ ಬಿಚ್ಚಿದಾಗ ಮನೆಯ ಮಾಲೀಕ ಹಾವಿಗೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ ಕೈಮುಗಿದಿದ್ದಾರೆ. ನಂತರ ಹಾವು ಹಿಡಿಯುವವರನ್ನು ಕರೆತಂದು ಹಾವನ್ನು ಹಿಡಿದು ಕಾಡಿಗೆ ಬಿಡಲಾಯಿತು. ಇದನ್ನೂ ಓದಿ: ಕಿಚ್ಚನಿಗೆ ಬರ್ತಡೆ ವಿಶ್ ಮಾಡಿದ ಡಿಕೆಶಿ
ಸದರಿ ದೃಶ್ಯವನ್ನು ಗ್ರಾಮದ ಜನತೆ ಆಶ್ಚರ್ಯಚಕಿತವಾಗಿ ನೋಡುತ್ತಾ ಅಪಾರ ಜನಸೇರಿ ಇಂತಹದ್ದೊಂದು ಘಟನೆಗೆ ಸಾಕ್ಷಿಯಾದರು.
