Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ
  • Bangalore
  • Politics
  • State

ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ

admin August 31, 2025
Screenshot_2025-08-31-17-27-26-20_6012fa4d4ddec268fc5c7112cbb265e7
Spread the love

ಶಹಾಪುರ: ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ರಾಜ್ಯದ ಪ್ರಮುಖವಾಗಿ ಕಲ್ಬುರ್ಗಿ, ವಿಜಯನಗರ, ಶಿವಮೊಗ್ಗ, ಹೊಸಪೇಟೆ, ತುಮಕೂರ, ಮಂಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧೆಡೆ ಕೈಗೊಂಡ ಜೆಜೆಎಂ (ಜಲ ಜೀವನ್ ಮೀಷನ್) ಕಾಮಗಾರಿಗಳ ಬಾಕಿ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸುವರ್ಣ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಧ್ಯಕ್ಷರಾದ ಜೋಗಿ ಜಯಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಗುತ್ತಿಗೆದಾರರು ಅನುಭವಿಸುತ್ತೀರ ಸಂಕಷ್ಟ ಕುರಿತು ಅವರ ಗಮನಕ್ಕೆ ತರಲಾಯಿತು. ಬಳಿಕ ಸಿದ್ದರಾಮಯ್ಯ ಅವರು ಮಾತನಾಡಿ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಮೀರ್ ಶುಕ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು. ಅವರು ಸಹ ಕೇಂದ್ರ ಸರ್ಕಾರದಿಂದ ಬಿಲ್ ತಡೆ ಹಿಡಿದಿದ್ದು, ಅನುದಾನ ಬಿಡುಗಡೆಯಾದ ತಕ್ಷಣ ಬಿಲ್ ಪಾವತಿಸುವುದಾಗಿ ತಿಳಿಸಿದರು.

ನಂತರ ಬಾಬುರಾವ ಚಿಂಚನಸೂರ, ಸೇರಿದಂತೆ ವಿವಿಧ ರಾಜಕೀಯ ನಾಯಕರ ಗುತ್ತಿಗೆದಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗಮನಕ್ಕೆ ತರಲಾಯಿತು.

ಒಂದು ವೇಳೆ ಒಂದು ವಾರದಲ್ಲಿ ಬಾಕಿ ಬಿಲ್ ಪಾವತಿಯಾಗದೇ ಹೋದರೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರ ಸಂಘ ಹೇಳಿದೆ.

ಕೇಂದ್ರ ಸಚಿವರಿಗೆ ಮನವಿ

ಇದೇ ವೇಳೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೂ ಮನವಿ ಪತ್ರ ಸಲ್ಲಿಸಿ ಕಾಮಗಾರಿ ಅವಧಿ ಮಿರಿದರೂ ಇನ್ನೂ ಬಿಲ್ ಪಾವತಿಯಾಗಿಲ್ಲಾ. ಕೇಲವೆಡೆ ದಲ್ಲಾಳಿಗಳಿಂದ ಗುತ್ತಿಗೆದಾರರು ಸಾಲ ಮಾಡಿ ಮಾಡಿದ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದೇ ನರಕದ ಜೀವನ ಅನುಭವಿಸುತ್ತಿದ್ದಾರೆ ಎಂದು ಗುತ್ತಿಗೆದಾರರ ಸಮಸ್ಯೆ ಕುರಿತು ರಾಜ್ಯಧ್ಯಕ್ಷ ಜೋಗಿ ಜಯಪ್ಪ ಅವರು ಸಚಿವರ ಗಮನಕ್ಕೆ ತಂದರು. ಬಳಿಕ ಸಚಿವರು ಮಾತನಾಡಿ ಕೇಂದ್ರ ಸರ್ಕಾರದ ಈವೊಂದು ಮಹತ್ವಕಾಂಕ್ಷಿ ಯೋಜನೆಯಿಂದ 15 ಕೋಟಿ ಕುಟುಂಬಸ್ಥರು ಶುದ್ಧ ಕುಡಿಯುವ ನೀರು ಕುಡಿಯುತ್ತಿದ್ದಾರೆ. ರಾಜ್ಯ ಸರ್ಕಾರ ಲೆಕ್ಕ ಕೋಡಲಿ ಕೇಂದ್ರದಿಂದ ಕೊಡಬೇಕಾದ ಅನುದಾನ ಕೊಡುತ್ತೇವೆ. ಗುತ್ತಿಗೆದಾರರು ಭಯ ಪಡುವ ಅಗತ್ಯವಿಲ್ಲಾ. ಪ್ರದಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತಂದು ಬಿಲ್ ಪಾವತಿಸುವ ಭರವಸೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮನವಿ

ಗುತ್ತಿಗೆದಾರರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು. ಈ ಕುರಿತು ಸದನದಲ್ಲಿ ಚರ್ಚಿಸಿ ಆದಷ್ಟು ಬೇಗ ಗುತ್ತಿಗೆದಾರರು ಕೈಗೊಂಡ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಬಸವರಾಜ ನಾಟೇಕರ್, ಯಮನಪ್ಪ ಆಗಸ್ಥಾಳ, ಸಂಗಣ್ಣ ಸೈದಾಪುರ್, ಸಣ್ಣ ಸೈದಪ್ಪ ಬಾಣತಿಹಾಳ, ಪರ್ವತರೆಡ್ಡಿ ಪೊಲೀಸ್ ಪಾಟೀಲ್, ಯಂಕಣ್ಣ ಮೇಟಿ, ಶರಣುಸಾಧು ಸಗರ, ಅಂಬರೀಶ ನಾಟೇಕರ್, ಶರಣು ನಾಟೇಕರ, ಮಾಳಪ್ಪ ಕವತಿ, ನಿಂಗಣ್ಣ ಬಾಣತಿಹಾಳ, ಬಾಬುಗೌಡ ಸಾದ್ಯಾಪುರ, ಭೀಮರಾಯ ಭಂಡಾರಿ, ದೇವು ಹೊಸಕೇರ, ಶರಣು ಮೇಟಿ, ರಾಯಪ್ಪ ಗಂಗನಾಳ, ಹನುಮಂತ, ರಾಯಗೌಡ ಬಿರಾದಾರ, ಮಾರುತಿ ಗಂಗನಾಳ, ಭೀಮನಗೌಡ ಬಿರಾದಾರ, ಅಂಬು ಸಗರ್, ಹೈಯಾಳಪ್ಪ ನಾಟೇಕರ, ಮಹೇಶ ಮೌರ್ಯ, ರಾಯಪ್ಪ ಮೇಟಿ, ಪರಶುರಾಮ ವಠಾರ, ನಾನಾಗೌಡ ಸೈದಾಪುರ, ಶೇಖರಗೌಡ ಶಖಾಪುರ ಸೇರಿದಂತೆ ಇತರರು ಇದ್ದರು.

About the Author

admin

Administrator

Visit Website View All Posts

Spread the love

Post navigation

Previous: ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜುಗೆ ಶಭ ಹಾರೈಸಿದ ಸಿಎಂ
Next: CM ಭೇಟಿಯಾದ ನಟ ರಾಮಚರಣ್

Views:

22

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.