ಬೀದರ್: ನಟ ವಿಷ್ಣುವರ್ಧನ್ ರವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಾನ ಮಾಡಿದವರ ವಿರುದ್ಧ ಇದೀಗ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದ್ದು, ಈ ಕುರಿತು ಅರಣ್ಯ ಇಲಾಖೆಯ ಸಚಿವರಾದ ಈಶ್ವರ ಖಂಡ್ರೆ ಅವರು ಪ್ರತಿಕ್ರಿಯಿಸಿದ್ದಾರೆ.
ಬೀದರ್ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಷ್ಣುವರ್ಧನ್ ಅವರು ಮೇರು ನಟರು ಅವರ ಸಮಾಧಿಯನ್ನು ಹೊಸದಾಗಿ ಎಲ್ಲಿ ಸ್ಥಾಪಿಸಬೇಕು, ಯಾವಾಗ ಸ್ಥಾಪಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಲು ಡಿಸಿಗೆ ಅರಣ್ಯಾಧಿಕಾರಿ ಪತ್ರ
ಈಗಾಗಲೇ ನಮ್ಮ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದಾರೆ, ಇದು ರೋಟಿನ್ ಕೆಲಸವಾಗಿದ್ದು, ಪ್ರಗತಿ ಪರಿಶೀಲನೆ ಮಾಡುವಾಗ ಎಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ. ಸಮಯ ತಕ್ಕಂತೆ ನಾನು ಸೂಚನೆ ಹಾಗೂ ಆದೇಶಗಳನ್ನು ಕೊಡುತ್ತಿದ್ದು, ಬೆಂಗಳೂರಿಗೆ ಹೋಗಿ ವಿಷ್ಣು ಸಮಾಧಿ ಜಾಗದ ವಿವಾದದ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
