Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪಾಲಕ್ ಸೊಪ್ಪು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
  • Healthy Life

ಪಾಲಕ್ ಸೊಪ್ಪು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

admin August 28, 2025
WhatsApp Image 2025-08-28 at 15.54.40
Spread the love

ಪಾಲಕ್ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಪಾಲಕ್ ಸೊಪ್ಪನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವಂತಹ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಇನ್ನು ಸಾಮಾನ್ಯವಾಗಿ ಪಾಲಕ್ ಸೊಪ್ಪನ್ನು ತಮ್ಮ ರುಚಿಗೆ ತಕ್ಕಂತೆ ಜನರು ಸಾಂಬಾರ್, ಪಾಲಕ್ ಪನ್ನೀರ್ ಹಾಗೂ ಪಾಲಕ್ ಜ್ಯೂಸ್ ಮಾಡಿಕೊಂಡು ಸೇವನೆ ಮಾಡುತ್ತಾರೆ. ಪಾಲಕ್ ಸೊಪ್ಪನ್ನು ಕ್ರಮೇಣವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಮೂಳೆಗೆ ಸಂಬಂಧಿಸಿದ ಕಾಯಿಲೆ ಹಾಗೂ ದೃಷ್ಟಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸಮಸ್ಯೆಗಳಿಗೆ ಪಾಲಕ್ ಸೊಪ್ಪು  ಸೇವನೆ ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಚರ್ಮದ ಹೊಳಪು: ವಿಟಮಿನ್‌ ಮತ್ತು ಖನಿಜಗಳು ಆಹಾರದಲ್ಲಿ ಹೆಚ್ಚಿದ್ದಷ್ಟೂ ಕೂದಲು ಮತ್ತು ಚರ್ಮ ನಳನಳಿಸುತ್ತವೆ. ಪಾಲಕ್‌ನಲ್ಲಿ ವಿಟಮಿನ್‌ ಸಿ ಮತ್ತು ಎ ಅಪಾರ ಪ್ರಮಾಣದಲ್ಲಿವೆ. ಮುಖದ ಮೇಲಿನ ಮೊಡವೆಗಳನ್ನು ಮಾಯ ಮಾಡಿ, ತ್ವಚೆಯ ಕಾಂತಿ ಹೆಚ್ಚಿಸುತ್ತವೆ. ಹೀಗೆ ಚರ್ಮದ ಪ್ರಭೆಯನ್ನು ಹೆಚ್ಚಿಸುವುದಕ್ಕೆಂದೇ ಪಾಲಕ್‌ ಜ್ಯೂಸ್‌ ಕುಡಿಯುವವರ ಸಂಖ್ಯೆ ಸಾಕಷ್ಟಿದೆ.

ತೂಕ ಇಳಿಕೆ: ಇಷ್ಟೊಂದು ಸತ್ವಗಳನ್ನು ಹೊಂದಿರುವ ಪಾಲಕ್‌ ಸೊಪ್ಪಿನಲ್ಲಿ ಕ್ಯಾಲರಿ ಕಡಿಮೆ. ಇದನ್ನು ಸೂಪ್‌, ಸ್ಮೂದಿ, ಸಲಾಡ್‌ ಮುಂತಾದ ಹಲವು ರೀತಿಯಲ್ಲಿ ತೂಕ ಇಳಿಕೆಯ ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹುದು. ನಾರು ಹೆಚ್ಚಿರುವುದರಿಂದ ಕೊಬ್ಬು ಕರಗಿಸಲು ಇದು ಸಹಾಯಕ.

ಮೂಳೆ ಸಮಸ್ಯೆಗೆ ಪರಿಹಾರ: ಪಾಲಕ್‌ ಸೊಪ್ಪಿನಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್‌ ಕೆ ಅಂಶಗಳು ಸಾಕಷ್ಟಿದ್ದು, ಮೂಳೆಗಳು ಬಲಗೊಳ್ಳುವುದಕ್ಕೆ ಇವೆರಡೂ ಬೇಕು. ನಿಯಮಿತವಾಗಿ ಪಾಲಕ್‌ ಸೊಪ್ಪನ್ನು ಬಳಸುವುದರಿಂದ, ವಯಸ್ಸಾದಂತೆ ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಆಸ್ಟಿಯೊಪೊರೋಸಿಸ್‌ ರೀತಿಯ ರೋಗಗಳನ್ನು ದೂರ ಇರಿಸಬಹುದು. ಇದನ್ನೂ ಓದಿ: ನಿಂಬೆ ಹಣ್ಣಿನ ಎಲೆಗಳಲ್ಲಿದೆ ಹಲವಾರು ಬೆನಿಫಿಟ್ಸ್!

ಕಣ್ಣಿನ ದೃಷ್ಟಿಗೆ ಉತ್ತಮ: ಪಾಲಕ್‌ ಸೊಪ್ಪಿನಲ್ಲಿ ಬೀಟಾ ಕ್ಯಾರೊಟಿನ್‌, ಲೂಟಿನ್‌ ಮತ್ತು ಝೆಕ್ಸಾಂಥಿನ್‌ನಂಥ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಅಧಿಕವಾಗಿದೆ. ಇವುಗಳಿಂದ ದೃಷ್ಟಿದೋಷಗಳು ಬರುವುದು ಕಡಿಮೆಯಾಗುತ್ತದೆ. ವಯಸ್ಸಾದಂತೆ ದೃಷ್ಟಿ ಮಂದವಾಗುವುದು, ಕಣ್ಣಿನ ಪೊರೆ ಎಂದೇ ಕರೆಯಲಾಗುವ ಕ್ಯಾಟರಾಕ್ಟ್‌ ಇತ್ಯಾದಿ ಕಣ್ಣನ್ನು ಬಾಧಿಸುವ ಸಮಸ್ಯೆಗಳನ್ನು ದೂರ ಇರಿಸಬಹುದು.

ರಕ್ತದೊತ್ತಡ ನಿಯಂತ್ರಣ: ಪಾಲಕ್‌ನಲ್ಲಿ ಖನಿಜಗಳು ಹೆಚ್ಚಿವೆ. ಅದರಲ್ಲೂ ಈ ಸೊಪ್ಪಿನಲ್ಲಿರುವ ನೈಟ್ರೇಟ್‌ ಅಂಶವು ರಕ್ತನಾಳಗಳ ಮೇಲಿನ ಒತ್ತಡವನ್ನು ಸುಧಾರಿಸಬಲ್ಲದು. ಈ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವು ನೀಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದು ರಕ್ತದೊತ್ತಡ ಇಳಿಸಲು ಮತ್ತು ಆ ಮೂಲಕ ಹೃದಯದ ಆರೋಗ್ಯಕ್ಕೂ ಪೂರಕವಾದದ್ದು.

About the Author

admin

Administrator

Visit Website View All Posts

Spread the love

Post navigation

Previous: ಧರ್ಮಸ್ಥಳ ವಿಚಾರದಲ್ಲಿ ಮಂಜುನಾಥ ಸ್ವಾಮಿಯೇ ಸರ್ಕಾರಕ್ಕೆ ಶಿಕ್ಷೆ ನೀಡ್ತಾನೆ: ಹೆಚ್‌ಡಿಕೆ
Next: ತಮ್ಮ ಮದುವೆ ಬಗ್ಗೆ ಅನುಶ್ರೀ ಹೇಳಿದ್ದೇನು?

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.