ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ ಹಾಗೂ ಪವಿತ್ರ ಗೌಡ ಸೇರಿದಂತೆ ಏಳು ಜನ ಆರೋಪಿಗಳಿಗೆ ಹೈಕೋರ್ಟ್ ನೀಡಿದ ಷರತ್ತುಬದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬೆನ್ನಲ್ಲೇ ಈಗಾಗಲೇ ದರ್ಶನ್ ಸೇರಿದಂತೆ ಏಳು ಜನ ಆರೋಗ್ಯಗಳು ಎರಡನೇ ಬಾರಿಗೆ ಜೈಲು ಸೇರವಾಸ ಅನುಭವಿಸುತ್ತಿದ್ದಾರೆ.
ಇನ್ನು ಕಳೆದ ಬಾರಿ ಜೇಲಿನಲ್ಲಿ ದರ್ಶನ್ ಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗುತ್ತಿತ್ತು ಎನ್ನುವುದು ಬಯಲಾಗುತ್ತಿದ್ದಂತೆ ದರ್ಶನ್ ಗೆ ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಈ ಬಾರಿ ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಸಾಮಾನ್ಯ ಕೈದಿಗಳಂತೆ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಮೇಲ್ಸೇತುವೆ ಮೇಲೆ ಡಿಸಿಎಂ ಬೈಕ್ ರೈಡ್
ಈ ಬಾರಿ ಆ ರೀತಿಯ ಯಾವುದೇ ರೀತಿಯ ಸವಲತ್ತುಗಳು ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ. ದರ್ಶನ್ ಇರುವ ಸೆಲ್ ಮುಂದೆ ಕಾರಿಡಾರ್ ಇದ್ದು, ಅಲ್ಲಿ ವಾಕಿಂಗ್ ಮಾಡೋಕೆ ಅವಕಾಶವಿದೆ. ಆದರೂ ಕೂಡ ದರ್ಶನ್ ಮಾತ್ರ ಸೆಲ್ನಲ್ಲೇ ವಾಕ್ ಮಾಡುತ್ತಿದ್ದಾರೆ. ಸಿಬ್ಬಂದಿ ನೀಡಿರುವ ತೆಳುವಾದ ಬೆಡ್ ಮೇಲೆಯೇ ನಿದ್ದೆ ಮಾಡುತ್ತಿದ್ದಾರೆ. ಸಹಚರರೊಂದಿಗೆ ಮಾತನಾಡದೇ ದಿನಪತ್ರಿಕೆ, ಓದುತ್ತಾ ಕಾಲಕಳೆಯುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.
