Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಾಂಗ್ರೆಸ್ ನ ಸೆಪ್ಟೆಂಬರ್ ಕ್ರಾಂತಿ ಆಗಲ್ಲಾ ಅದು ವಾಂತಿ ಆಗುತ್ತೆ: ಸುಧಾಕರ್
  • Politics
  • State

ಕಾಂಗ್ರೆಸ್ ನ ಸೆಪ್ಟೆಂಬರ್ ಕ್ರಾಂತಿ ಆಗಲ್ಲಾ ಅದು ವಾಂತಿ ಆಗುತ್ತೆ: ಸುಧಾಕರ್

admin August 14, 2025 1 minute read
WhatsApp Image 2025-08-14 at 17.58.36
Spread the love

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಕೆ ಸುಧಾಕರ್ ಅವರ ಮತೆ ಹಲವಾರು ಬಾರಿ ಮಾತಿನ ಗುದ್ದಾಟ ನಡೆದಿದೆ. ಪ್ರದೀಪ್ ಈಶ್ವರ ಅವರು ಸಂಸದ ಕೆ ಸುಧಾಕರ್ ಅವರಿಗೆ ಈಗಾಗಲೇ ಹಲವಾರು ಬಾರಿ ಮಾತಿನಲ್ಲಿಯೇ ಚಮಕ್ ನೀಡಿದ್ದಾರೆ.

ಇದೀಗ ಸಂಸದ ಸುಧಾಕರ್ ಅವರು ಪ್ರದೀಪ್ ಈಶ್ವರ್ ಅವರಿಗೆ ವಾರ್ನ್ ಮಾಡಿದ್ದಾರೆ. ನನ್ನ ತಂಟೆಗೆ ಬಂದ್ರೆ ನಿನಗೆ ಒಂದು ಗತಿ‌ ಕಾಣಿಸಬೇಕಾಗುತ್ತೆ ಎಂದು ಶಾಸಕ ಪ್ರದೀಪ್ ಈಶ್ವರ್ ಗೆ ಸಂಸದ ಸುಧಾಕರ್ ವಾರ್ನ್ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ನನಗೆ ಪೋನ್ ಮಾಡುತ್ತಾರೆ. ಎಂತಹಾ ನೀಚ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾನೆ ಎನ್ನುತ್ತಾರೆ. ರಾಜಕೀಯವಾಗಿ ನನ್ನ ಏಳಿಗೆ ಸಹಿಸಲಾಗದೆ ಷಡ್ಯಂತ್ರ ಮಾಡುತ್ತಿದ್ದಾರೆ. ಇದರ ಬಗ್ಗೆ ಸಿಎಂ, ಗೃಹ ಸಚಿವರಿಗೆ ಮಾಹಿತಿ ಗೋತ್ತಿದೆ ಆದ್ರು ಸುಮ್ನೆ ಇದ್ದಾರೆ. ರಾಜ್ಯದಲ್ಲಿ ಸಾಕಷ್ಟು ಪ್ರಕರಣಗಳು ಕಾಂಗ್ರೆಸ್ ಮುಖಂಡ ಮೇಲೆ ಇದೆ. ನೇರವಾಗಿ ಕಾಂಗ್ರೆಸ್ ಶಾಸಕರು ಸಚಿವರ ಮೇಲೆ ಆರೋಪ ಮಾಡಿದ್ರು. ಆದ್ರೆ ಯಾರ ಮೇಲೆಯೂ ಎಫ್ಐಆರ್ ಮಾಡಿಲ್ಲಾ.ಆದ್ರೆ ನನ್ನ ಮೇಲೆ ಎಫ್ಐಆರ್ ಮಾಡಿದ್ದಾರೆ ನಾನು ಬಿಜೆಪಿ ಮುಖಂಡ, ಸಂಸದ ಎಂದು ಎಫ್ಐಆರ್ ಆಗಿದೆ ಎಂದರು.

ಇದಕ್ಕೆಲ್ಲಾ ಮುಂದೆ ಜನ ತಕ್ಕ ಪಾಠ ಕಲಿಸುತ್ತಾರೆ. ಪ್ರಿಯಾಂಕ ಖರ್ಗೆಗೆ ಅವರಿಗೆ ನನ್ನ ಬಗ್ಗೆ ಗೋತ್ತಿದೆ. ಆದ್ರೆ ಎಂಸಿ ಸುಧಾಕರ್ ಮಾತು ಕೇಳ್ತೀಯಾ? ಡೆತ್ ನೋಟ್ ನಲ್ಲಿ ಕೊಡುಗಿನ ಶಾಸಕರ ಹೆಸರು ಬರೆದಿದ್ರು. ಆದ್ರೆ ಯಾವುದೇ ಎಫ್ಐಆರ್ ಮಾಡಲ್ಲಾ. ಕೊಪ್ಪಳ, ಶಿವಮೊಗ್ಗ, ಯಾದಗಿರಿ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ನವರ ಮೇಲೆ ಎಫ್ಐಆರ್ ಆಗಿಲ್ಲಾ. ಯಾವುದೇ ಪುರಾವೆ ಇಲ್ಲದೆ ಸಂಸದರ ಮೇಲೆ ಎಫ್ಐಆರ್ ಮಾಡಿದ್ದಾರೆ. ಇತಂಹ ಭ್ರಷ್ಟ ಸರ್ಕಾರ ದಾರಿದ್ರ್ಯ ಸರ್ಕಾರ ನಾನು ನೋಡಿಲ್ಲಾ ಎಂದು ಗುಡುಗಿದರು. ಇದನ್ನೂ ಓದಿ: ದರ್ಶನ್‌ ಅರೆಸ್ಟ್‌

ಈ‌ ಹಿಂದೆ ಸಿದ್ದರಾಮಯ್ಯ ಹೀಗೆ ಇರಲಿಲ್ಲಾ ಆದ್ರೆ ಈಗ ಹಾಳಾಗಿದ್ದಾರೆ. ಸಿದ್ದರಾಮಯ್ಯ ನವರು ನನಗೆ ಒಳ್ಳೆಯ ಮಾತುಗಳನ್ನು ಹೇಳಿದ್ರು. ಆದ್ರೆ ಸಿಎಂ ತದ್ವಿರುದ್ಧವಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಭವಿಷ್ಯ ಇಲ್ಲಾ. ಕಾಂಗ್ರೆಸ್ ನೀರಿನ ಮೇಲಿನ ಗುಳ್ಳೆ ಇದಂತೆ. ಕಾಂಗ್ರೆಸ್ ಸೆಪ್ಟೆಂಬರ್ ಕ್ರಾಂತಿ ಆಗಲ್ಲಾ ಅದು ವಾಂತಿ ಆಗುತ್ತೆ ಎಂದರು. ಮುಂದೆ ಒಂದು ಎರಡು ವಿಕೆಟ್‌ ಹೋಗುತ್ತೆ ನಂತರ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತೆ. ಕಾಂಗ್ರೆಸ್ ವಿಶ್ವಾಸಘಾತುಕವಾಗಿ ನಡೆದುಕೊಳ್ಳುತ್ತೆ.

ಪೊಲೀಸರು ಗುಲಾಮಗಿರಿ ಮಾಡುತ್ತಿದ್ದಾರೆ. ಪೊಲೀಸರು ಗುಲಾಮರಾಗುತ್ತಿದ್ರೆ ಸಾವಿರಾರು ಸಂಖ್ಯೆಯಲ್ಲಿ ಜನ ಪೊಲೀಸ್ ಠಾಣೆಗೆ ನುಗ್ಗುತ್ತಾರೆ. 420 ಗಳನ್ನು ಹಿಡಿದ್ರೆ ಅಟ್ಟೆಂ ಟು ಮರ್ಡರ್ ಮರ್ಡರ್ ಕೇಸ್ ಹಾಕ್ತಾರೆ. ಕ್ಷೇತ್ರದಲ್ಲಿ ಯಾವ ರೀತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು ಗೋತ್ತಿದೆ. ತಪ್ಪಿತ್ಥರಿಗೆ ಶಿಕ್ಷೆ ಆಗುವವರಿಗೂ ನಾನು ವಿರಾಮಿಸುವುದಿಲ್ಲಾ. ನಾನು ನಮ್ಮ‌ ರಾಜ್ಯಮಟ್ಟದ ಮುಖಂಡರ ಜೊತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತೆ ಎಂದರು.

 

 

About the Author

admin

Administrator

Visit Website View All Posts

Spread the love

Post navigation

Previous: ದರ್ಶನ್‌ ಅರೆಸ್ಟ್‌
Next: ಧ್ವಜಾರೋಹಣ ನೆರವೇರಿಸಿದ ಸಿಎಂ

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.