ಬಳ್ಳಾರಿ: ಇಂದು ಕರ್ನಾಟಕದ ಹಲವಡೆ ಇಡಿ ಅಧಿಕಾರಿಗಳು ಭ್ರಷ್ಟ ಉದ್ಯಮಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಹೌದು, ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ಗಣಿ ಉದ್ಯಮಿಗಳ ಮೇಲೆ ದಿಢೀರ್ ದಾಳಿ ನಡೆಸಿರುವುದರಿಂದ ಭ್ರಷ್ಟ ಉದ್ಯಮಿಗಳು ಫುಲ್ ಶಾಕ್ ಆಗಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಗಣಿ ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶಗೆ ಸೇರಿದ ಮನೆ, ಅಂಗಡಿ, ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ವಸ್ತಿಕ್ ನಾಗರಾಜ್ಗೆ ಸೇರಿದ ಹೊಸಪೇಟೆಯ ಎಂಜೆ ನಗರದ ಮನೆ, ಎಪಿಎಂಸಿಯ ಬಳಿ ಇರೋ ಸ್ಟೀಲ್ ಅಂಗಡಿ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಮನೆ ಮೇಲೆ ಇಡಿ ದಾಳಿ
ಅಲ್ಲದೆ 20ನೇ ವಾರ್ಡ್ನ ಕಾಂಗ್ರೆಸ್ ಸದಸ್ಯರಾಗಿರುವ ಕಾರದಪುಡಿ ಮಹೇಶ್ ಮನೆಯಲ್ಲೂ ಶೋಧ ನಡೆಸಲಾಗುತ್ತಿದೆ. ಇಬ್ಬರೂ ಗಣಿ ಉದ್ಯಮಿಗಳ ಮನೆಯಲ್ಲಿ ಇ.ಡಿ ಅಧಿಕಾರಿಗಳು ತೀವ್ರಶೋಧ ನಡೆಸುತ್ತಿದ್ದಾರೆ. ಬೆಲೆಕೇರಿ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಇಬ್ಬರೂ ಗಣಿ ಉದ್ಯಮಿಗಳು ಭಾಗಿಯಾಗಿರುವ ಆರೋಪ ಹೊತ್ತಿದ್ದಾರೆ. ಆದ್ದರಿಂದ ಇಡಿ ಅಧಿಕಾರಿಗಳು ಇಂಚ್ ಇಂಚು ಶೋಧನ ನಡೆಸಿದ್ದಾರೆ.
