ಬೆಂಗಳೂರು: ಇಂದು ರಾಜ್ಯದಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಹಬ್ಬಕ್ಕೆ ಬೇಕಾಗಿರುವ ಪ್ರಮುಖ ಸಾಮಗ್ರಿಗಳ ಖರೀದಿಯಲ್ಲಿ ಸಾರ್ವಜನಿಕರು ಮುಂದಾಗಿದ್ದು, ಮಾರುಕಟ್ಟೆಯಲ್ಲಿ ಹೂ, ಹಣ್ಣು, ತರಕಾರಿ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾಗಿದೆ.
ಹೌದು, ಇಂದು ವರ ಕೊಡುವ ವರಮಹಾಲಕ್ಷ್ಮಿ ಹಬ್ಬ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪೂಜೆಗೆ ಬೇಕಾಗಿರುವ ಹಣ್ಣು, ಹಂಪಲು, ಬಾಳೆದಿಂಡು ಹೀಗೆ ಹಲವಾರು ಪೂಜೆ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡಿನಲ್ಲಿವೆ.
ಮಾರುಕಟ್ಟೆಯಲ್ಲಿ ಕನಕಾಂಬರ ಹೂವಿನ ಬೆಲೆ ಕೇಜಿಗೆ 1600, ಮಲ್ಲಿಗೆ ಹೂಗಳು 900, ಕಾಕಡ ಹೂವು 800, ಸೇವಂತಿಗೆ 800 ಹೀಗೆ ಹಲವಾರು ಹೂಗಳು ಕೂಡ ಬಾರಿ ಏರಿಕೆ ಕಂಡಿದೆ.
