ಕಾರವಾರ: ರಾಜ್ಯದಲ್ಲಿ ಕೆಲ ಭಾಗಗಳಲ್ಲಿ ಆಂಬುಲೆನ್ಸ್ ದರ ಹೆಚ್ಚಾಗಿ ವಿಧಿಸುತ್ತಾರೆ ಎಂಬ ದೂರಿನ ಆಧಾರದ ಮೇಲೆ ಇದೀಗ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಇನ್ಮುಂದೆ ಓಲಾ, ಉಬರ್ ಗಳಂತೆ ಅಂಬುಲೆನ್ಸ್ ಕೂಡ ಬುಕ್ ಮಾಡಬಹುದು ಎಂದು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಕುರಿತು ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಓಲಾ, ಊಬರ್ ಆ್ಯಪ್ಗಳ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕ್ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ. ಕೆಪಿಎಂಇ ಅಡಿಯಲ್ಲಿ ಆ್ಯಂಬುಲೆನ್ಸ್ಗಳನ್ನು ಸರ್ಕಾರದಡಿಯಲ್ಲಿ ತರುತ್ತಿದ್ದೇವೆ. ಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಆ್ಯಂಬುಲೆನ್ಸ್ ಹೇಗಿರಬೇಕು, ಮಾನದಂಡ ಹೇಗಿರಬೇಕು. ಜೊತೆಗೆ ದರವನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋದ್ರ ಕುರಿತು ಚರ್ಚೆ ನಡೆಸಿ ನಿಯಮ ಜಾರಿಗೆ ತರುತ್ತವೆ. ಮೊಬೈಲ್ ಹೆಲ್ತ್ ಯುನಿಟ್ಗಳು, ಆ್ಯಂಬುಲೆನ್ಸ್ಗಳಿಗೆ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಮಿಕರಿಗೆ 10 ಗಂಟೆ ಕೆಲಸದ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ
ಅಲ್ಲದೆ ಸರ್ವೀಸ್ ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ, ಪಾರದರ್ಶಕತೆ ತರುತಿದ್ದೇವೆ. ಆ್ಯಂಬುಲೆನ್ಸ್ಗಳು ಕ್ವಾಲಿಟಿ ಇರುವುದಿಲ್ಲ. ಅದರಲ್ಲಿ ಬರೀ ಗಾಡಿ ಇರುತ್ತದೆ, ಒಂದು ಬೆಡ್ ಮಾತ್ರ ಇರುತ್ತವೆ. ಹೀಗಾಗಿಯೇ ಆ್ಯಂಬುಲೆನ್ಸ್ಗಳಿಗೆ ಮಾನದಂಡ ತರುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
