ಬೆಂಗಳೂರು: ಆಗಸ್ಟ್ 5 ರಂದು ಕರ್ನಾಟಕ ರಾಜ್ಯಕ್ಕೆ ರಾಹುಲ್ ಗಾಂಧಿಯವರು ಆಗಮಿಸುತ್ತಿದ್ದು ಈಗಾಗಲೇ ಕಾಂಗ್ರೆಸ್ನ ಬೃಹತ್ ಕಾರ್ಯಕ್ರಮಕ್ಕೆ ವೇದಿಕೆ ಕೂಡ ಸಜ್ಜಾಗುತ್ತಿದೆ.
ಹೌದು, ಆಗಸ್ಟ್ 5 ರಂದು ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿರುವ ಫ್ರೀಡಂ ಪಾರ್ಕಿಗೆ ಆಗಮಿಸುತ್ತಿದ್ದಾರೆ ಆದ್ದರಿಂದ ಫ್ರೀಡಂ ಪಾರ್ಕ್ ನಲ್ಲಿ ಅದ್ದೂರಿ ವೇದಿಕೆ ಸಜಾಗುತ್ತಿದೆ.
ಇನ್ನು ಅದ್ದೂರಿ ವೇದಿಕೆ ಸಜ್ಜು ಮಾಡಲು ಕೆಲವು ಗಿಡ, ಮರಗಳು ಅಡ್ಡವಾಗಿರುವುದರಿಂದ ಫ್ರೀಡಂ ಪಾರ್ಕ್ ನಲ್ಲಿರುವ ಮರಗಳ ಹನನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಫ್ರೀಡಂ ಪಾರ್ಕ್ ಆವರಣದಲ್ಲಿರುವ ಎರಡು ಮರಗಳನ್ನು ಕಡಿಯಲಾಗಿದೆ. ಎಇಇ ಸೂಚನೆ ಮೇರೆಗೆ ಮರ ಕಡಿದಿದ್ದೇವೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
ಜೆಸಿಬಿ ಮೂಲಕ ಕಾಮಗಾರಿ ಮಾಡುತ್ತಿರುವ ಕಾರ್ಯಕ್ರಮ ಆಯೋಜಕರು ನಾವು ಎಇಇ ಸೂಚನೆ ಮೇರೆಗೆ ಈ ಮರಗಳನ್ನು ಕಡಿದು ಕಾಮಗಾರಿ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ ಪ್ರೀತಂ ಪಾರ್ಟಿಗೆ ಕಾಂಪೌಂಡ್ ಕಟ್ಟಿರುವುದನ್ನು ಕೂಡ ಕಾರ್ಯಕ್ರಮ ಆಯೋಜಿಕರು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ರಮ್ಯಾಗೆ ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ಸ್, ರಾಕ್ ಲೈನ್ ವೆಂಕಟೇಶ್ ಹೇಳಿದ್ದೇನು?
ಇದನ್ನೆಲ್ಲಾ ನೋಡಿದ ಸಾರ್ವಜನಿಕರು ಕಾಂಗ್ರೆಸ್ ನಾಯಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರ ವಿರುದ್ಧ ಆಕ್ರೋಶ ಅವರ ಹಾಕಿದ್ದಾರೆ.
