ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಬೆಂಬಲ ನೀಡಿದ್ದಕ್ಕೆ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ.
ಇನ್ನು ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ಈಗಾಗಲೇ ನಟಿ ರಮ್ಯಾ ಅವರು ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಅಲ್ಲದೆ ನಟಿ ರಮ್ಯಾ ಅವರಿಗೆ ನಟ ಪ್ರಥಮ್, ಲಾಯರ್ ಜಗದೀಶ್ ಸೇರಿದಂತೆ ಹಲವರು ನಟ-ನಟಿಯರು ರಮ್ಯಾಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇನ್ನು ಇದೀಗ ನಿರ್ಮಾಪಕ ಹಾಗೂ ನಟ ರಾಕ್ಲೈನ್ ವೆಂಕಟೇಶ್ ಅವರು ಕೂಡ ನಟಿ ರಮ್ಯಾ ಪರ ನಿಂತಿದ್ದಾರೆ. ರಮ್ಯಾ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ವಿಚಾರ ಉದ್ಭವ ಮಾಡಿದವರು ಹಾಗೂ ಮುಂದುವರೆಸಿಕೊಂಡು ಹೋಗುವವರಿಗೆ ಶಿಕ್ಷೆ ಆಗ್ಬೇಕು. ಎದುರು ನಿಂತು ಮಾತನಾಡುವವರನ್ನು ಎದುರಿಸಬಹುದು. ಎಲ್ಲೋ ನಿಂತು ಮಾತಾಡುವವರನ್ನು ಹೇಗೆ ಸಹಿಸಿಕೊಳ್ಳೋದು? ಯಾರೇ ಹೀರೋ ಆಗಿದ್ರೂ ಅವರ ಅಭಿಮಾನಿಗಳು ನಿಜಕ್ಕೂ ಹೀಗೆ ಮಾಡಿದ್ದೇ ಆಗಿದ್ರೆ ತಪ್ಪು. ನಿಮ್ಮ ಮನೆ ಹೆಣ್ಣು ಮಕ್ಕಳನ್ನ ತೃಪ್ತಿ, ಸಂತೋಷವಾಗಿಟ್ಟುಕೊಳ್ಳಿ. ಯಾವ ಸ್ಟಾರ್ ನಟರೂ ಬಂದು ಕಾಪಾಡೋಲ್ಲ ಎಂದಿದ್ದಾರೆ
ಗಾಳಿಯಲ್ಲಿ ಗುಂಡು ಹೊಡೆಯುವವರನ್ನು ಕೇರ್ ಮಾಡಲ್ಲ ನಾನು. ಹೀರೋಗೆ ಸಪೋರ್ಟ್ ಮಾಡ್ಕೊಂಡು ನಿಲ್ಲೋದಾದ್ರೆ ಎದುರು ಬಂದು ನಿಲ್ಲೋದು ಗಂಡಸ್ತನ. ಆದರೆ ಎಲ್ಲೋ ಇದ್ದುಕೊಂಡು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ್ದಾರೆ. ನಾನೇ ರಮ್ಯಾಗೆ ಹೇಳ್ತೀನಿ ಪಾಠ ಕಲಿಸಿ, ಎಂದಿದ್ದಾರೆ. ಇದನ್ನೂ ಓದಿ: ರಮ್ಯಾ ವಿರುದ್ಧ ಕಾನೂನು ಸಮರಕ್ಕೆ ನಿಂತ ದರ್ಶನ್ ಪತ್ನಿ!
ಆಗಿರೋ ತಪ್ಪನ್ನು ಸರಿಪಡಿಸಿಕೊಂಡು ನೀವೇ ಬನ್ನಿ. ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗ ಬಲಿ ಕೊಡಬೇಡಿ. ಯಾರೋ ಎಂಟತ್ತು ಜನ ಹೊಟ್ಟೆ ತುಂಬಿದವರ ಬಗ್ಗೆ ನೀವು ಮಾತಾಡಿದ್ರೆ ಇನ್ನುಳಿದ ಸಾವಿರಾರು ಜನ ಏನ್ಮಾಡ್ಬೇಕು? ಇಲ್ಲಿಗೆ ನಿಲ್ಲಿಸಿ. ಇದಕ್ಕೆ ಸಂಬಂಧಪಟ್ಟ ಕಲಾವಿದ ಆಗಲಿ ಅಥವಾ ಸಂಬಂಧಪಟ್ಟವರೇ ಆಗಿದ್ದರೂ ನಿಲ್ಲಿಸಿ ಎಂದಿದ್ದಾರೆ.
