ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿ ಒಂದರ ಬೆಲೆ ಏರಿಕೆಯಾಗುತ್ತಿದ್ದು, ಈಗಾಗಲೇ ಬಸ್ ಟಿಕೆಟ್ ದರ ಏರಿಕೆ, ಮೆಟ್ರೋ ಟಿಕೆಟ್ ದರ ಏರಿಕೆ ಸೇರಿದಂತೆ ತರಕಾರಿ ಬೆಲೆ ಕೂಡ ಏರಿಕೆ ಆಗಿರುವ ಬೆನ್ನೆಲೆ ಮತ್ತೆ ಇದೀಗ ಆಟೋ ದರ ಕೂಡ ಏರಿಕೆಯಾಗಿದೆ
ಹೌದು, ಬೆಂಗಳೂರಿನಲ್ಲಿರುವ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದೀಗ ಬೆಲೆ ಏರಿಕೆ ಬರೆ ಬೀಳಲಿದೆ. ಇಂದಿನಿಂದ ಆಗಸ್ಟ್ 1ರಿಂದ ಆಟೋ ಪ್ರಯಾಣದ ಬೆಲೆ ಏರಿಕೆಯಾಗಲಿದೆ.
ಕಳೆದ ತಿಂಗಳ 14ನೇ ತಾರೀಖಿನಂದು ಬೆಂಗಳೂರು ಆಟೋ ದರವನ್ನು ಹೆಚ್ಚಿಸಿ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ರು. ಈ ಆದೇಶ ಇಂದಿನಿಂದ ಜಾರಿಗೆ ಬರ್ತಿದ್ದು, ಬೆಂಗಳೂರಿಗರಿಗೆ ದುಬಾರಿ ದುನಿಯಾದಲ್ಲಿ ಆಟೋ ಪ್ರಯಾಣ ದರವೂ ಹೊರೆಯಾಗಲಿದೆ. ಇದನ್ನೂ ಓದಿ: ಪ್ರಭು ಚೌಹಾಣ್ ಪುತ್ರನಿಗೆ ಬಂಧನ ಭೀತಿ!
2 ಕಿಮೀಗೆ ಕನಿಷ್ಠ ಪ್ರಯಾಣ ದರ 30 ರಿಂದ 36ಕ್ಕೆ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಇದು ರಾಜಧಾನಿ ಜನರ ಜೇಬಿಗೆ ಕತ್ತರಿ ಹಾಕಲಿದೆ.
