ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಮೊದಲು ನನಗೆ ಮಾತು ನೀಡಿದ್ದಾರೆ ಹಾಗಾಗಿ ಮುಂದಿನ ಕೆಎಂಎಫ್ ಅಧ್ಯಕ್ಷ ನಾನೇ ಎಂದು ನಂಜೇಗೌಡ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ನನಗೆ ಭರವಸೆ ನೀಡಿದ್ದು ನಾನೇ ಕರ್ನಾಟಕದ KMF ಅಧ್ಯಕ್ಷನಾಗುತ್ತೇನೆ ಎಂದು ಮಾಲೂರು ಶಾಸಕ ನಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎನ್ನುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೀಮಾ ನಾಯಕ್ ಆಯ್ಕೆ ಆಗುವಾಗ ಮುಂದೆ ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.
ನನಗೆ ಅನುಭವ ಇದ್ದು, ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೆ. ಆಗ ನನಗೆ ಮಾತು ನೀಡಿದ್ದರು. ಅಂದು ಮಾತು ಕೊಟ್ಟಂತೆ ನಾನೇ ಅಧ್ಯಕ್ಷ ಆಗುತ್ತೇನೆ ಎಂದರು.
