ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಘಟನೆ ಕುರಿತಾಗಿ ಈಗಾಗಲೇ ಇಡೀ ರಾಜ್ಯವನ್ನೇ ಬೆಚ್ಚಿಬಿಲಿಸುವಂತೆ ಇದೆ. ಧರ್ಮಸ್ಥಳದಲ್ಲಿ ಮೃತ ದೇಹ ವಿಲೇವಾರಿ ಪ್ರಕರಣದ ತನಿಖೆಗಾಗಿ ಧರ್ಮಸ್ಥಳಕ್ಕೆ ಎಸ್ಐಟಿ ತಂಡ ಭೇಟಿ ನೀಡುವಂತೆ ಈಗಾಗಲೇ ಮಾಹಿತಿ ನೀಡಿದ್ದೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪೊಲೀಸರು ಕೂಡ ಈ ಕುರಿತು ಸೂಚನೆ ಪಡೆದಿದ್ದು, ಎಸ್ಐಟಿ ತಂಡದಿಂದ ಯಾವುದೇ ಅಧಿಕಾರಿಯನ್ನು ಹೊರಗುಳಿಸುವುದಿಲ್ಲ ಎಂದರು. ಯಾವುದೇ ಅಧಿಕಾರಿಯು ಹೊರಗುಳಿದರೆ ಅದನ್ನು ತಿಳಿಸುವಂತೆ ಹೇಳಲಾಗಿದೆ. ಆ ಬಳಿಕ ಅದರ ಮೇಲೆ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸಿಎಂ ಡಿಕೆಶಿ ಅವರಿಗೆ ಅನಾರೋಗ್ಯ!
ಈ ತನಿಖೆಗೆ ವಿರೋಧ ವ್ಯಕ್ತಪಡಿಸುವುದು ರಾಜಕೀಯ ಉದ್ದೇಶದಿಂದ ಆಗಿದೆ. ಈಗಿನಿಂದಲೇ ವಿವಿಧ ರೀತಿಯಲ್ಲಿ ಫ್ರೇಮ್ ಮಾಡಲಾಗುತ್ತಿದೆ. ಅವರ ಮನಸ್ಸಿನಲ್ಲಿ ಬೇರೆ ಕಾರಣಗಳಿರಬಹುದು ಎಂದರು.
