Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಆಫ್ರಿಕಾದಲ್ಲಿ ಭಾರತದ ಮೊದಲ ಸರ್ಕಾರಿ ಕೌಶಲ್ಯ ಪಾಲುದಾರಿಕೆ
  • Bangalore
  • Front news
  • Politics
  • State

ಆಫ್ರಿಕಾದಲ್ಲಿ ಭಾರತದ ಮೊದಲ ಸರ್ಕಾರಿ ಕೌಶಲ್ಯ ಪಾಲುದಾರಿಕೆ

admin July 20, 2025 1 minute read
Spread the love

ಬೆಂಗಳೂರು: ಭಾರತ-ಆಫ್ರಿಕಾ ನಡುವಿನ ಮಹತ್ವದ ಸಹಕಾರದಲ್ಲಿ ಹೆಗ್ಗುರುತು ಮೂಡಿದೆ. ಕರ್ನಾಟಕದ ಸರ್ಕಾರಿ ಸ್ವಾಮ್ಯದ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು (GTTC) ನಮೀಬಿಯಾ ಈಗ ತನ್ನ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ತರಬೇತಿ ಪಾಲುದಾರನಾಗಿ ಆಯ್ಕೆ ಮಾಡಿದೆ.

ಆಫ್ರಿಕಾದ ನೆಲದಲ್ಲಿ ಭಾರತೀಯ ಸರ್ಕಾರಿ ಜ್ಞಾನ ಸಂಸ್ಥೆಯೊಂದು ಮೀಸಲಾದ ಘಟಕವನ್ನು ಅಲ್ಲಿ ಸ್ಥಾಪಿಸುತ್ತಿದೆ.
ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಜಿಟಿಟಿಸಿಯ ಡಾ. ವೈ.ಕೆ. ದಿನೇಶ್ ಕುಮಾರ್ ಮತ್ತು ಆಫ್ರಿಕಾ ಇಂಡಿಯಾ ಎಕನಾಮಿಕ್ ಫೌಂಡೇಶನ್ (AIEF) ಪ್ರಧಾನ ಕಾರ್ಯದರ್ಶಿ ಅನಿಲ್ ಶಿಂಧೆ ಅವರು ಸಹಯೋಗವನ್ನು ಔಪಚಾರಿಕಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದರು.

ಐದು ದಶಕಗಳ ಇತಿಹಾಸ ಹೊಂದಿರುವ ಜಿಟಿಟಿಸಿ ಕರ್ನಾಟಕದಾದ್ಯಂತ 20 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಜನರಿಗೆ ನಿಖರ ಉಪಕರಣ ತಯಾರಿಕೆ, ಸಿಎನ್‌ಸಿ ಕಾರ್ಯಾಚರಣೆ, ಮೆಕಾಟ್ರಾನಿಕ್ಸ್ ಮತ್ತು ರೊಬೊಟಿಕ್ಸ್‌ನಲ್ಲಿ ತರಬೇತಿ ನೀಡುತ್ತಿದೆ. ಇದರ ಹಳೆಯ ವಿದ್ಯಾರ್ಥಿಗಳ ಜಾಲವು ಐದು ಲಕ್ಷಕ್ಕೂ ಹೆಚ್ಚು ಕೌಶಲ್ಯಪೂರ್ಣ ವೃತ್ತಿಪರರನ್ನು ಹೊಂದಿದೆ ಮತ್ತು ಅದರ ಪಠ್ಯಕ್ರಮವು ಪ್ರಸ್ತುತ ಉದ್ಯಮದ ಅಗತ್ಯಗಳಿಗೆ ನಿಕಟವಾಗಿ ಹೊಂದಿಕೊಂಡಿದೆ.

ಜಿಟಿಟಿಸಿಯು ಆಫ್ರಿಕಾದ ಕೈಗಾರಿಕಾ ಕೌಶಲ್ಯ ಅಗತ್ಯಗಳಿಗೆ ಒಂದು ದೃಢವಾದ ಮಾದರಿಯಾಗಿದೆ. ಇದು “ಆಫ್ರಿಕನ್ ಪರಿಸ್ಥಿತಿಗೆ ಹೊಂದಿಕೊಳ್ಳುವ” ಸಾಮರ್ಥ್ಯವನ್ನು ಹೊಂದಿದೆ. ಈ ಪಾಲುದಾರಿಕೆಯು ನಮೀಬಿಯಾದಲ್ಲಿ ಕೌಶಲ್ಯಪೂರ್ಣ ಪ್ರತಿಭೆಯ ಕಣಜ ನಿರ್ಮಿಸುತ್ತದೆ. ಆಫ್ರಿಕಾದಾದ್ಯಂತ ಜಿಟಿಸಿಸಿ ಪದವೀಧರರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಮೂಲದ ಎಂಎಸ್‌ಎಂಇಗಳಿಗೆ ಹೆಚ್ಚುವರಿ ಮಾರುಕಟ್ಟೆ ಅವಕಾಶ ಒದಗಿಸಲಿದೆ ಮತ್ತು ಶಿಕ್ಷಣ, ಕೌಶಲ್ಯದಲ್ಲಿ ಜಾಗತಿಕ ಮನ್ನಣೆಯನ್ನು ನೀಡಲಿದೆ. ಶಿಕ್ಷಣ ರಾಜತಾಂತ್ರಿಕತೆಯ ಮೂಲಕ ಕರ್ನಾಟಕದ ಶಕ್ತಿಯನ್ನು ಸಬಲೀಕರಣಗೊಳಿಸಲಿದೆ ಎಂದು ಎಂದು ಸಚಿವರು ಹೇಳಿದರು.

ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವೈ.ಕೆ ದಿನೇಶ್ ಕುಮಾರ್, ಈ ಉಪಕ್ರಮವು ಕರ್ನಾಟಕವನ್ನು ಕೌಶಲ್ಯ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ ಎಂದು ಹೇಳಿದರು. “ಉಪಕರಣಗಳ ತಯಾರಿಕೆ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಜಿಟಿಟಿಸಿಯ ಪರಿಣತಿಯು ಈಗ ಜಾಗತಿಕ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.

About the Author

admin

Administrator

Visit Website View All Posts

Spread the love

Post navigation

Previous: ಭೋವಿ ಗುರುಪೀಠಕ್ಕೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ ಬೇಟಿ
Next: ಬಿಜೆಪಿಯವರದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ- ಸಿದ್ದರಾಮಯ್ಯ

Views:

11

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.