ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ನೆಟ್ವರ್ಕ್ ಸಿಗದೆ ಪ್ರಯಾಣಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನರಿತ ಬಿಎಂಆರ್ ಸಿಎಲ್ ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ವೈಫೈ ಅಳವಡಿಕೆ ಮಾಡಲು ಮುಂದಾಗಿದೆ.
ಹೌದು, ಇನ್ನುಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್, ಬಿಟಿಎಸ್, ಸೆಲ್ಯುಲರ್ ಟವರ್ ಹಾಗೂ ಪೋಲ್ಗಳ ಮೂಲಕ 4G ಹಾಗೂ 5G ಸೇವೆ ಲಭ್ಯವಾಗಲಿದೆ. ಈ ಯೋಜನೆ ನೂರು ಶೇಕಡಾ ಕಾರ್ಯತ್ಮಕವಾಗಲು ಬಿಎಂಆರ್ಸಿಎಲ್ ಸಂಸ್ಥೆ, ಎಡ್ವಾನ್ಸ್ಡ್ ಕಮ್ಯೂನಿಕೇಶನ್ ಅಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಕಂಪನಿ ಜತೆ 13 ವರ್ಷಗಳ ಬಾಡಿಗೆ ಆಧಾರದ ಒಪ್ಪಂದಕ್ಕೆ ಸಹಿ ಹಾಕಿದೆ. ಇದನ್ನೂ ಓದಿ: ಅಂತೂ ಇಂತೂ ಅನುಶ್ರೀಗೆ ಕೂಡಿಬಂತು ಕಂಕಣ ಭಾಗ್ಯ!
ಈ ಯೋಜನೆಯಿಂದ ವಿಶೇಷವಾಗಿ ಭೂಗತ ಮಾರ್ಗ ಹೊಂದಿರುವ ಡೈರಿ ಸರ್ಕಲ್ದಿಂದ ನಾಗವಾರದವರೆಗೆ ಇರುವ 12 ಮೆಟ್ರೋ ನಿಲ್ದಾಣಗಳ ಪ್ರಯಾಣಿಕರಿಗೆ ನಿರಂತರ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಲಭ್ಯವಾಗಲಿದೆ. ಇದರಿಂದ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.
ವೈಫೈ ಸೇವೆಗೆ ವಿಧಿಸಲಾಗುವ ಶುಲ್ಕದಿಂದ ಬಿಎಂಆರ್ಸಿಎಲ್ಗೆ ಪ್ರಯಾಣ ದರದ ಹೊರತಾಗಿ ಹೆಚ್ಚುವರಿ ಆದಾಯವೂ ಸಿಗಲಿದೆ.
