ಬೆಂಗಳೂರು: ಆರ್ಸಿಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಬುಧವಾರ ಜುಲೈ 16) ಹೈಕೋರ್ಟ್ ನಲ್ಲಿ ಮಹತ್ವದ ತೀರ್ಪು ಪ್ರಕಟವಾಗಲಿದೆ. ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಲಿದೆ.
ಸರ್ಕಾರದ ಸುಪರ್ದಿಗೆ ಗಾಳಿ ಆಂಜಿನೇಯ ಆದೇಶ ಪ್ರಶ್ನಿಸಿ ಅರ್ಜಿ ಹಿನ್ನೆಲೆ, ಅರ್ಜಿ ಸಂಬಂಧ ಇಂದು ಹೈಕೋರ್ಟ್ ಆದೇಶ ಹೊರಡಿಸಲಿದೆ. ನಿನ್ನೆ ಅರ್ಜಿ ಸಂಬಂಧ ಹೈಕೋರ್ಟ್ ನ ನ್ಯಾ. ಸುನೀಲ ದತ್ ಯಾದವ್ ರ ಪೀಠದಲ್ಲಿ ವಿಚಾರಣೆ ನಡೆದಿತ್ತು. ಅಲ್ಲದೇ ತೀರ್ಪು ಇಂದಿಗೆ ಮುಂದೂಡಿತ್ತು. ಅದರಂತೆ ಇಂದು ದ್ವಿಸದಸ್ಯ ಪೀಠವು ಪ್ರಕರಣ ಸಂಬಂಧ ಆದೇಶ ನೀಡಲಿದೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣಕ್ಕೆ ಮೂಲ ಕಾರಣವೇನೆಂದು ತಿಳಿಸಿದ ನ್ಯಾ.ಡಿ ಕುನ್ಹಾ ಆಯೋಗ
