ಬೆಂಗಳೂರು: ಪತ್ರಿಕೆಯ ಮೂಲಕ ಸಮಾಜಕ್ಕೆ ಮತ್ತು ಓದುಗರಿಗೆ ಏನನ್ನು ಕೊಡಬೇಕು ಎನ್ನುವುದನ್ನು ಅರಿತು ಪಿ.ಲಂಕೇಶ್ ಅವರು ವಾರಪತ್ರಿಕೆಯ ಓದುಗರನ್ನು ಸೃಷ್ಟಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಅವರು ಪತ್ರಿಕೋದ್ಯಮಕ್ಕೆ ಹೊಸ ಧಿಕ್ಕನ್ನು ತೋರಿಸಿಕೊಟ್ಟರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಮಂಗಳವಾರ (ಜುಲೈ 08) ನಗರದ ಪ್ರೆಸ್ಕ್ಲಬ್ನಲ್ಲಿ ‘ಕೆಂಧೂಳಿ ಪತ್ರಿಕಾ ಬಳಗ’ದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ‘ವಾರಪತ್ರಿಕೆ ಅಂದು-ಇಂದು, ಲಂಕೇಶ್ ಕಂಡ ವಾರಪತ್ರಿಕೆ ಮತ್ತು ಸೈದ್ಧಾಂತಿಕ ನಿಲುವುಗಳು’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾನತಾಡಿದ ಅವರು, ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿಮೀರುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದರು.
ಇಂದಿನ ಯುವ ಪತ್ರಕರ್ತರೆಲ್ಲರೂ ಲಂಕೇಶರ ಬಗ್ಗೆ ತಿಳಿದುಕೊಳ್ಳಲೇಬೇಕು. ವಾರಪತ್ರಿಕೆಗಳಿಗೆ ಇಂದು ಓದುಗರೇ ಇಲ್ಲವೇನೋ ಎನ್ನುವ ಅನುಮಾನ ಶುರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ: ಕೆ.ಹೆಚ್ ಮುನಿಯಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಕೇಶ್ರನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಲಂಕೇಶರ ಗರಡಿಯಲ್ಲಿ ಸಾಹಿತಿಗಳು, ಚಿಂತಕರು ರಾಜಕಾರಣಿಗಳು ಸೇರಿದಂತೆ ಹಲವರು ಬೆಳೆದಿದ್ದಾರೆ. ಅವರ ಕೊನೆಯ ದಿನಗಳಲ್ಲಿಯೂ ಅವರು ಓದುತ್ತಿದ್ದರು. ಓದುವುದನ್ನು ಎಂದಿಗೂ ನಿಲ್ಲಿಸಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಪ್ರಸಿದ್ಧಿ, ಘನೆತೆಯನ್ನು ತಂದುಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಆರ್.ಜಿ.ಹಳ್ಳಿನಾಗರಾಜ್, ಪಿ.ಕುಸುಮಾ ಆಯರಹಳ್ಳಿ, ಶಿವಾನಂದ ತಗಡೂರು, ತುರುವನೂರು ಮಂಜುನಾಥ, ಪರಶಿವ ಧನಗೂರು ಸೇರಿದಂತೆ ಹಲವರು ಭಾಗವಹಿಸಿದ್ದರು.
