ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಗುತ್ತಿದ್ದಂತೆ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಡೆವಿಲ್ ಸಿನಿಮಾ ಚಿತ್ರೀಕರಣ ಬೆಂಗಳೂರು ಸೇರಿದಂತೆ ರಾಜಸ್ಥಾನ ಹಾಗೂ ಇದೀಗ ವಿದೇಶದಲ್ಲೂ ಕೂಡ ಚಿತ್ರೀಕರಣ ನೆರವೇರಿತ್ತಿದೆ.
ಇನ್ನು ವಿದೇಶಕ್ಕೆ ತೆರಳಿ ಶೂಟಿಂಗ್ ಮಾಡಲು ನಟ ದರ್ಶನ್ ಅವರಿಗೆ ಕೋರ್ಟ್ ನಿಂದ ವಿಶೇಷ ಅನುಮತಿ ಬೇಕಾಗುತ್ತದೆ, ಅನುಮತಿ ಇಲ್ಲದೆ ದರ್ಶನ್ ಅವರು ಬೇರೆ ದೇಶಕ್ಕೆ ಹೋಗುವಂತಿಲ್ಲ.
ಮೊದಲು ನಟ ದರ್ಶನ್ ಅವರು ವಿದೇಶಕ್ಕೆ ಹೋಗಲು ಕೇವಲ ಜುಲೈ 1 ರಿಂದ 25 ರವರೆಗೆ ಮಾತ್ರ ದಿನಾಂಕವನ್ನು ಕೋರ್ಟ್ ನಿಗದಿ ಮಾಡಿತ್ತು. ಆದರೆ ಇಸ್ರೇಲ್ ಮತ್ತು ಇರಾನ್ ಮತ್ತೆ ನಡೆದ ಯುದ್ಧದ ಕಾರಣದಿಂದಾಗಿ ದುಬೈಗೆ ಚಿತ್ರೀಕರಣಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ ಆದಕಾರಣ ಇದೀಗ ಮತ್ತೆ ನಡೆ ದರ್ಶನ್ ಅವರು ವಿದೇಶ ಪ್ರಯಾಣದ ದಿನಾಂಕ ಮರುನಿಗದಿಗೆ ಕೋರಿ ದರ್ಶನ್ ಅವರು 57ನೇ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು (ಸೋಮವಾರ ಜುಲೈ 07) ನ್ಯಾಯಾಲಯಕ್ಕೆ ಈ ವಿಚಾರ ತಿಳಿಸಿದ ದರ್ಶನ್ ಪರ ಸುನಿಲ್ ಕುಮಾರ್, ಕೋರ್ಟ್ ಜು.1ರಿಂದ ಜು.25ರ ವರೆಗೆ ದುಬೈ ಮತ್ತು ಯುರೋಪ್ಗೆ ತೆರಳಲು ಅವಕಾಶ ನೀಡಿದೆ. ಆದರೆ ಯುದ್ಧದ ಕಾರಣದಿಂದ ಜುಲೈ 11 ರಿಂದ 30 ರವರೆಗೆ ಅವಕಾಶ ನೀಡುವಂತೆ ಕೋರಿದರು. ಇದನ್ನೂ ಓದಿ: ಸ್ಯಾಂಡಲ್ ವುಡ್ ಕ್ವೀನ್ ಗೆ ಒಲಿದು ಬಂದ ಅಂಬಾಸಿಡರ್ ಭಾಗ್ಯ..!
ಈಗಾಗಲೇ ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ ನೀಡಿದೆ. ದಿನಾಂಕ ಮತ್ತು ಸ್ಥಳ ಬದಲಾವಣೆಗೆ ಮಾತ್ರ ನಾವು ಅನುಮತಿ ಕೇಳುತ್ತಿದ್ದೇವೆ. ಜು.10 ರಂದು ಕೋರ್ಟ್ಗೆ ಬಂದು ನನ್ನ ಕಕ್ಷಿದಾರ ದರ್ಶನ್ ಹಾಜರಾಗುತ್ತಾರೆ ಎಂದು ತಿಳಿಸಿದರು. ಮರುನಿಗದಿಗೆ ಕೋರಿ ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಂಗಳವಾರ (ನಾಳೆ) ಆದೇಶ ಪ್ರಕಟಿಸುವುದಾಗಿ ತಿಳಿಸಿತು.
