ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಪ್ರತಿ ಮನೆ ಮನೆಗೆ ಕುಡಿಯಲು ಕಾವೇರಿ ನೀರು ಕೊಡುವಂತಹ ಪುಣ್ಯದ ಕಾರ್ಯಕ್ರಮವನ್ನು ಇಂದು ಕಲ್ಕೆರೆಯ ರಿಚ್ಚಸ್ ಗಾರ್ಡನ್ ಬಡಾವಣೆಯಲ್ಲಿ ಶ್ರೀಕಾವೇರಿ ಮಾತೆಗೆ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಬೈರತಿ ಬಸವರಾಜ್ ಅವರು ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಐತಿಹಾಸಿಕ ಪೂಜಾ ಕಾರ್ಯಕ್ರಮಕ್ಕೆ ಊರಿನ ಎಲ್ಲಾ ಮುಖಂಡರುಗಳು, ಬಡಾವಣೆಗಳ ನಿವಾಸಿಗಳು, ಅಸೋಸಿಯೇಷನ್ ಪದಾಧಿಕಾರಿಗಳು, ಕಾರ್ಯಕರ್ತರು ,ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
