ಶಹಾಪುರ: ಕರ್ನಾಟಕ ಜಾತ್ಯಾತೀತ ಜನತಾ ದಳದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಜುಲೈ.05 ರಂದು ನಗರಕ್ಕೆ ಆಗಮಿಸಲಿದ್ದು, ಜನರೊಂದಿಗೆ ಜನತಾದಳ ಕಾರ್ಯಕ್ರಮದ ಅಂಗವಾಗಿ ಮೊಬೈಲ್ ಕರೆ ಮೂಲಕ ಸದಸ್ಯತ್ವ ನೊಂದಣಿ ಅಭಿಯಾನ ಕುರಿತು ಮಾತನಾಡಲಿದ್ದಾರೆ ಎಂದು ಮಾಜಿ ಶಾಸಕರಾದ ಗುರುಪಾಟೀಲ್ ಶಿರವಾಳರವರು ತಿಳಿಸಿದರು.
ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೊಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು, ನಗರ ರಾಯಲ್ ಪ್ಯಾಲೆಸ್ ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಭಾಗವಹಿಸುವ ನೀರಿಕ್ಷೆಯಿದೆ. ಅಲ್ಲದೆ ಅಂದಿನ ಕಾರ್ಯಕ್ರಮಕ್ಕೆ ಜೆಡಿಎಸ್ ಮಾಜಿ ಮಂತ್ರಿಗಳಾದ ಬಂಡೆಪ್ಪ ಕಾಶಂಪೂರ, ಮಾಜಿ ಶಾಸಕರಾದ ದೊಡಪ್ಪಗೌಡ ಪಾಟೀಲ್, ಶಾಸಕರಾದ ಶರಣಗೌಡ ಪಾಟೀಲ್ ಕಂದಕೂರ ಪಾಲ್ಗೊಳ್ಳಲಿದ್ದಾರೆ, ಜೆಡಿಎಸ್, ಸಕ್ರೀಯ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲೆ ವಿರೋಧ ಪಕ್ಷದ ದ್ವನಿ ಯಾವ ಗೂಡಿನಲ್ಲಿ ಅಡಗಿದೆ ಗೊತ್ತಿಲ್ಲ?
ರಾಜ್ಯದಲ್ಲೆ ವಿರೋಧ ಪಕ್ಷದ ದ್ವನಿ ಯಾವ ಗೂಡಿನಲ್ಲಿ ಅಡಗಿದೆ ಗೊತ್ತಿಲ್ಲ? ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಕುರಿತು ಯಾವ ರಾಜ್ಯದ ನಾಯಕರು ವಿರೋಧ ವ್ಯಕ್ತಪಡಿಸುತ್ತಿಲ್ಲ, ಈ ಅವ್ಯವಸ್ಥೆಯಿಂದ ಕೊನೆಗೆ ಕಾಂಗ್ರೆಸ್ ಪಕ್ಷದ ಶಾಸಕರೇ ತಮ್ಮಗಾದ ಅನ್ಯಾಯ ಮತ್ತು ಅಸಮಾದಾನದ ಕುರಿತು ಅನುಧಾನ ಮರೀಚಿಕೆ ಬಗ್ಗೆ ದ್ವನಿ ಎತ್ತಿ ಅಂತರಜಾಲತಾಣದಲ್ಲಿ ವೈರಲ್ ಮಾಡಿದರು. ಇದರಿಂದ ರಾಜ್ಯ ಸರ್ಕಾರದ ಸಾಧನೆಗಳು ಕರ್ನಾಟಕದ ಜನರಿಗೆ ತೋರಿಸಿದರು. ಅಲ್ಲದೆ ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೊಟಿ ನೀಡುವದಕ್ಕಿಂತಲೂ ಪ್ರತಿ ಗ್ರಾಮಭಿವೃದ್ದಿಗೆ ಅನೂಕೂಲವಾಗುತ್ತಿತ್ತು, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದಲ್ಲಿ ಅನುಧಾನದ ಕೊರತೆಯಿಂದ ಇಂದು ಅಭಿವೃದ್ದಿಗೆ ಕುಂಠಿತಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕರು ಗುರು ಪಾಟೀಲ್ ಶಿರವಾಳ ಹೇಳಿದರು. ಇದನ್ನೂ ಓದಿ: ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಬಿ.ವೈ.ವಿಜಯೇಂದ್ರ
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ಮಾಜಿ ಎಮ್ಎಲ್ಸಿ ಅಮಾತೆಪ್ಪ ಕಂದಕೂರ, ಹಿರಿಯ ಮುಖಂಡರಾದ ರಾಮಚಂದ್ರ ಕಾಶಿರಾಜ ವನದುರ್ಗಾ, ಜೆಡಿಎಸ್ ಅಧ್ಯಕ್ಷರಾದ ವಿಠಲ ವಗ್ಗಿ, ಶ್ರೀಕಾಂತಗೌಡ ಸುಬೇದಾರ, ಶಿವುಮೋಟಗಿ, ನಗರಸಭೆ ಸದಸ್ಯರಾದ ಅಪ್ಪಣ್ಣ ದಶವಂತ ಲಾಲನ ಸಾಹೇಬ್ ಖುರೇಶಿ, ಸತೀಶ ಪಂಚಬಾವಿ, ಅಶೋಕ ಮತ್ತು ಹಿರಿಯ ಮುಖಂಡರಾದ ಅಮರೇಶ ವಿಭೂತಹಳ್ಳಿ, ಸೂಗಯ್ಯಸ್ವಾಮೀ ಹೀರೆಮಠ ಸೇರಿದಂತೆ ಅನೇಕರು ಇದ್ದರು.
