ಬೆಂಗಳೂರು: ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ ಅವರಿಗೆ ಚಿತ್ರತಂಡ ಸೇರಿದಂತೆ ಅವರ ಅಭಿಮಾನಿಗಳು ಶುಭಕೋರಿದ್ದಾರೆ.
ಅಲ್ಲದೆ ಹುಟ್ಟು ಹಬ್ಬದ ದಿನದಂದೇ ವಿಭಿನ್ನ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿರುವ ಗಣೇಶ್ ಅವರು ಭಜರಂಗಿ ಅವತಾರದಲ್ಲಿ ಮಿಂಚಿದ್ದಾರೆ.
ಹೌದು, ಇಂದು (ಬುಧವಾರ ಜುಲೈ 02) ಗಣೇಶ ಅವರ ಹುಟ್ಟು ಹಬ್ಬದ ಪ್ರಯುಕ್ತ ‘Yours Sincerely Raam ಚಿತ್ರತಂಡವು ವಿಶೇಷವಾಗಿ ‘Yours Sincerely Raam ಚಿತ್ರದ ಫೋಟೋ ರಿವಿಲ್ ಮಾಡುವ ಮೂಲಕ ಗಣೇಶ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದೆ. ಇದನ್ನೂ ಓದಿ: ನಟ ಅಮೀರ್ ಖಾನ್ ಕುಶಲೋಪರಿ ವಿಚಾರಿಸಿದ ಸಿಎಂ
ಗಣೇಶ್ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್ ಬಹಳ ವಿಶೇಷವಾಗಿದೆ. ಗಣೇಶ್ ಹಿಂದೆಂದೂ ಕಾಣದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿಮಾಲಯದ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್ ನಲ್ಲಿ ರಾಮ ಸೈಕಲ್ ಮೇಲೆ ಕುಳಿತಿದ್ದು, ಭಜರಂಗಿ ಭುಜದಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಕಾಣಿಸುತ್ತದೆ. ಪೋಸ್ಟರ್ ನಾನಾ ಕುತೂಹಲ ಹುಟ್ಟುಹಾಕುವ ಕ್ರಿಯೇಟ್ ಮಾಡುವುದರ ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
