ಬೆಂಗಳೂರು: ರಾಜ್ಯದಾದ್ಯಂತ ನಿನ್ನೆ ಕೆಂಪೇಗೌಡರ ಜಯಂತಿಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದು, ಅದರಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಕೆಂಪೇಗೌಡರ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ನಾಡಿನ ನಿರ್ಮಾಣಕಾರರಾದ ನಾಡಪ್ರಭು ಕೆಂಪೇಗೌಡ ಜಯಂತಿಯ ಪ್ರಯುಕ್ತ, ನಿನ್ನೆ (ಶುಕ್ರವಾರ ಜೂನ್ 27) ಹೆಚ್ಎಸ್ಆರ್ ಬಡಾವಣೆಯ ಕೆಂಪೇಗೌಡ ವೃತ್ತದಲ್ಲಿರುವ ಅವರ ಪುತ್ಥಳಿಗೆ ಬಿಜೆಪಿ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು, ಪುಷ್ಪಾರ್ಪಣೆ ಹಾಗೂ ಮಾಲರ್ಪಣೆ ಮಾಡುವ ಮೂಲಕ ಆ ಮಹಾನ್ ನಾಯಕನಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಕೆಂಪೇಗೌಡರು ಆಧುನಿಕ ಬೆಂಗಳೂರಿನ ನಿರ್ಮಾತೃ: ಸಿಎಂ
ಬೆಂಗಳೂರು ನಗರವನ್ನು ಸ್ಥಾಪಿಸಿದ ಈ ದೂರ್ಧರ್ಶಿ ನಾಯಕನ ದಾರಿದೀಪ ನಮ್ಮ ಆಧುನಿಕ ನಗರದ ಪ್ರಗತಿಗೆ ಸ್ಫೂರ್ತಿಯಾಗಿದೆ. ಅವರ ದತ್ತಚಿಂತನೆಯನ್ನು ನೆನಪಿಸಿಕೊಂಡು, ನಗರ ಅಭಿವೃದ್ದಿಯಲ್ಲಿ ನಮೂದಾದ ಅವರ ಮೌಲ್ಯಗಳನ್ನು ನಮ್ಮ ಕಾರ್ಯಗಳಲ್ಲಿ ಅಳವಡಿಸೋಣ ಎಂದರು.
