Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳ ವಿಫಲ ನಿವಾಸಿಗಳ ಆಕ್ರೋಶ 
  • State

ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳ ವಿಫಲ ನಿವಾಸಿಗಳ ಆಕ್ರೋಶ 

admin June 27, 2025 1 minute read
Spread the love

ಹಾರೋಹಳ್ಳಿ: ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ಪೊರಕೆ ಚಳುವಳಿಯ ಎಚ್ಚರಿಕೆ ನೀಡಿದರು.
ಹಾರೋಹಳ್ಳಿ ಪಟ್ಟಣದ ರಂಗನಾಥ ಬಡಾವಣೆ ಬೋರಯನ ಬೀದಿ ನಿವಾಸಿಗಳು ಬಡಾವಣೆಯಲ್ಲಿ ಪೊರಕೆ ಚಳುವಳಿ ನಡೆಸಿ ಸುಮಾರು ವರ್ಷಗಳಿಂದ ಬಡಾವಣೆಗೆ ಯಾವುದೇ ಸೌಲಭ್ಯ ದೊರೆತಿಲ್ಲ. ಇಲ್ಲಿನ ರಸ್ತೆಗಳು ತುಂಬಾ ಹದಗೆಟ್ಟುಹೋಗಿದ್ದು, ಚರಂಡಿ ಸಹ ಹಾಳಾಗಿವೆ ಎಂದು ಅಳಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಓಡಾಡಲು ತೊಂದರೆ: ಬಡಾವಣೆ ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿದೆ. ಆದರೆ, ಈ ತನಕ ಅಡ್ಡ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳಿಗೆ ಡಾಂಬರು ಹಾಕಿಲ್ಲ. ಜನ ಕಚ್ಚಾರಸ್ತೆಯಲ್ಲೇ ಓಡಾಡಬೇಕು. ವಿವಿಧ ಕಾಮಗಾರಿಗಾಗಿ ಮಣ್ಣಿನ ರಸ್ತೆ ಅಗೆದು ಹಾಗೇ ಬಿಟ್ಟಿದ್ದಾರೆ. ಈಗ ಅದು ಕೆಸರು ಗದ್ದೆಯಾಗಿದೆ. ಶಾಲಾ ಮಕ್ಕಳ ವಾಹನ ಹಾಗೂ ಸಾರ್ವಜನಿಕರು ಸಂಚರಿಸಲು ಹರ ಸಾಹಸ ಪಡುವಂತಾಗಿದೆ. ವೃದ್ಧರು, ಮಕ್ಕಳು ಓಡಾಡಲು ಆಗುತ್ತಿಲ್ಲ ಜೊತೆಗೆ ಕೆಲವರು ಇದೇ ರಸ್ತೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುವರು.

ಚರಂಡಿ ವ್ಯವಸ್ಥೆಯಿಲ್ಲ: ಬಡಾವಣೆಯಲ್ಲಿ ಕೊಳೆಚೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶಗಳಲ್ಲಿ ಹರಿಯುತ್ತಿದೆ. ಮನೆ ಮುಂದೆ ಕೊಳಚೆ ನೀರು ನಿಲ್ಲುತ್ತಿದ್ದು, ಗಲೀಜು ತಾಂಡವವಾಡುತ್ತಿದೆ. ಇರುವ ಚರಂಡಿಯಲ್ಲಿ ರಾಶಿ, ಗಿಡ ಗಂಟಿಗಳು ಬೆಳೆದು ನಿಂತು ವಿಷ ಜಂತುಗಳ ತಾಣವಾಗಿದೆ. ಮಳೆ ಬಂದಾಗ ಚರಂಡಿ ನೀರು ರಸ್ತೆಯ ಮೇಲೆಲ್ಲೆ ಹರಿದು ಮನೆಗೆ ನುಗ್ಗಿ ಹಾವು ಜೇಳುಗಳು ಮನೆಗೆ ನುಗ್ಗುವುದರ ಜೊತೆಗೆ ಜನ ಓಡಾಡುವದು ದುಸ್ತರವಾಗುತ್ತದೆ.

ಆಧಿಕಾರಿ ಜನಪ್ರತಿನಿಧಿಗಳ ಅಸಡ್ಡೆ: ಇಲ್ಲಿಯ ನಿವಾಸಿಗಳು ಲಿಖಿತವಾಗಿ ಮತ್ತು ಮೌಕಿಖವಾಗಿ ಪಟ್ಟಣ ಪಂಚಾಯಿತಿ ಕಚೇರಿಗೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುವುದು ಜನರ ಅಳಲು.
ಚುನಾವಣೆ ವೇಳೆ ರಸ್ತೆ ದುರಸ್ತಿ ಡಾಂಬರೀಕರಣ ಚರಂಡಿ ಬೀದಿ ದೀಪ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡುವ ಎಲ್ಲ ಪಕ್ಷಗಳ ಜನ ಪ್ರತಿನಿಧಿಗಳು ಚುನಾಚಣೆ ಬಳಿಕ ಇತ್ತ ಸುಳಿಯುವುದಿಲ್ಲ ಮತ್ತೆ ಚುನಾವಣೆ ಬದ್ದಾಗ ಓಟ್ ಕೇಳಲು ಬರುವರು.

ತೆರಿಗೆ ಮಾತ್ರ ಬೇಕು: ತೆರಿಗೆ ಮಾತ್ರ ಬೇಕು ಪ್ರತಿ ವರ್ಷ ಪಟ್ಟಣ ಪಂಚಾಯಿತಿ ನಿಗದಿಪಡಿಸಿರುವ ಎಲ್ಲ ರೀತಿಯ ತೆರಿಗೆಗಳನ್ನು ಇಲ್ಲಿನ ನಿವಾಸಿಗಳು ತಪ್ಪದೆ ಪಾವತಿಸುತ್ತಿದ್ದಾರೆ. ಆದರೆ ಬಡಾವಣೆಗೆ ಸೌಕರ್ಯಕ್ಕೆ ಕಲ್ಪಿಸುತ್ತಿಲ್ಲ. ಜನರಿಂದ ತೆರಿಗೆ ಭರಿಸಿಕೊಳ್ಳುವ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ನಿವಾಸಿಗಳು ದೂರುಗಳ ಸುರಿ ಮಳೆಗೈದರು.

ಖಾತೆಗೆ ಹಣ ಕೊಡಬೇಕು: ಮನೆಗೆ ಸಂಬಂಧಪಟ್ಟ ಖಾತೆ ಮಾಡಿಸಲು ಹೋದರೆ ಒಂದು ಖಾತೆಗೆ 30-50 ಸಾವಿರ ಲಂಚ ನೀಡಬೇಕು ಇಲ್ಲದಿದ್ದರೆ ತಿಂಗಳುಗಟ್ಟಲೆ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಅಲೆದಾಡಿಸುವರು ಎಂದು ಬಡಾವಣೆ ಮಹಿಳೆ ಹೇಳಿದರು.
ಚಂದಾ ಎತ್ತಿ ಲಂಚ ಕೊಡುವೆವು: ಪಟ್ಟಣದ ಪಂಚಾಯಿತಿ ಅಧಿಕಾರಿಗಳು ಪ್ರತಿ ಕೆಲಸಕ್ಕೂ ಲಂಚದ ಕೊಟ್ಟರೆ ಮಾತ್ರ ಮಾಡುವೆವು ಎಂದು ತಿಳಿದುಕೊಂಡಿದ್ದಾರೆ ಬಡಾವಣೆಗಳ ಎಲ್ಲರ ಬಳಿ ಚಂದಾ ಎತ್ತಿ ನಿಮ್ಮಗೆ ಲಂಚ ಕೊಡುವೆವು ಬಂದು ನಮ್ಮಗೆ ಮೂಲಭೂತ ಸೌಲಭ್ಯ ಕೊಡಿ ಎಂದು ಅಳಲು ತೋಡಿಕೊಂಡರು.
ಮೂಲಭೂತ ಸೌಲಭ್ಯ ಒದಗಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೀನಾಮೇಷ ಎನಣಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಪಟ್ಟಣದ ಪಂಚಾಯಿತಿ ಮುಂದೆ ಪೊರಕೆ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

About the Author

admin

Administrator

Visit Website View All Posts

Spread the love

Post navigation

Previous: 5 ಹುಲಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ: ಈಶ್ವರ ಖಂಡ್ರೆ
Next: RSS ತನ್ನ ದೇಶದ್ರೋಹಿ ನಡವಳಿಕೆಗೆ ಕಡಿವಾಣ ಹಾಕಲಿ: ಹೆಚ್ ಸಿ ಮಹದೇವಪ್ಪ

Views:

12

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.