ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಆವರಣದಲ್ಲಿ ಇಂದು (ಬುಧವಾರ ಜೂನ್ 25) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಹುಬ್ಬಳ್ಳಿ) ವಿಭಾಗದಲ್ಲಿ ಚಾಲನ ವೃತ್ತಿ ತರಬೇತಿಯಲ್ಲಿ ಉತ್ತೀರ್ಣರಾಗಿರುವ ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವರಾಗಿರುವಂತಹ ರಾಮಲಿಂಗಾರೆಡ್ಡಿ ರವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಹುಬ್ಬಳ್ಳಿ) ಅಧ್ಯಕ್ಷರಾದ ಬರಮಗೌಡ ರಾಜು (ಅ)ಕಾಗೆ ರವರು ಸಾಂಕೇತಿಕವಾಗಿ ಚಾಲಕ ಕಂ ನಿರ್ವಾಹಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಿದರು. ಇದನ್ನೂ ಓದಿ: 140 ಕೋಟಿ ಭಾರತೀಯರಿಗೆ ಹೆಮ್ಮೆಯ ಕ್ಷಣ; ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣ
ಈ ಸಂದರ್ಭದಲ್ಲಿ ಅಕ್ರಂ ಪಾಷ ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, (ಕರಾರಸಾ ನಿಗಮ) ಡಾ. ನಂದಿನಿದೇವಿ ಕೆ., ಭಾ.ಆ.ಸೇ. ನಿರ್ದೇಶಕರು, (ಸಿಬ್ಬಂದಿ ಮತ್ತು ಜಾಗೃತ), ಇಬ್ರಾಹಿಂ ಮೈಗೂರ, ಭಾಆಸೇ., ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಕರಾರಸಾ ನಿಗಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
