ಬೆಂಗಳೂರು: ತಮ್ಮ ಕಾಮಿಡಿ ಮೂಲಕವೇ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಚಿಕ್ಕಣ್ಣ ಅವರು ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಟನಾಗಿ ಅಭಿನಯಿಸಿದ್ದರು. ಉಪಾಧ್ಯಕ್ಷ ಚಿತ್ರದಲ್ಲಿ ಹೀರೋ ಆಗಿ ನಡೆಸಿದ ಚಿಕ್ಕಣ್ಣ ಅವರು ಮತ್ತೆ ಇದೀಗ ಲಕ್ಷ್ಮಿಪುತ್ರ ಸಿನಿಮಾದಲ್ಲಿ ಎರಡನೇ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾನೆ.
ಯೆಸ್…ಕಾಮಿಡಿಯನ್ ಆಗಿ ಹೊರಹೊಮ್ಮಿದ ಚಿಕ್ಕಣ್ಣ ಅವರು ಇದೀಗ ನಾಯಕನಟನಾಗಿ ಎರಡನೇ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದು, ಲಕ್ಷ್ಮಿ ಪುತ್ರ ಸಿನಿಮಾದ ಪೋಸ್ಟರ್ ರಿವಿಲ್ ಆಗಿದೆ. ಇನ್ನು ಈ ಪೋಸ್ಟರ್ ನಲ್ಲಿ ನಟ ಚಿಕ್ಕಣ್ಣ ಅವರು ಸಾಂಪ್ರದಾಯಿಕ ಉಡುಗೆ ತೊಟ್ಟು ಕೈಯಲ್ಲಿ ಬಾಳೆಗೊನೆ ಹಿಡಿದು ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ʼಬಿಲ್ಲ ರಂಗ ಬಾಷʼ ಸೆಟ್ ನ ಫೋಟೋ ರಿವೀಲ್ ಮಾಡಿತಾ ಚಿತ್ರತಂಡ?
ಲಕ್ಷ್ಮಿಪುತ್ರ ಚಿತ್ರವನ್ನು ವಿಜಯ್ ಎಸ್ ಸ್ವಾಮಿ ನಿರ್ದೇಶಿಸಿದ್ದು, ತಾಯಿ ಮತ್ತು ಮಗನ ನಡುವಿನ ಬಾಂಧವ್ಯದ ಸುತ್ತ ಸುತ್ತುತ್ತದೆ. ನಟಿ ತಾರಾ ತಾಯಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ಎಪಿ ಅರ್ಜುನ್ ಬರೆದಿದ್ದಾರೆ.
