ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹು ಕೋಟಿ ವೆಚ್ಚದ ‘ಬಿಲ್ಲ ರಂಗ ಭಾಷ’ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳು ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ‘ಬಿಲ್ಲ ರಂಗ ಭಾಷ’ ಸೆಟ್ನದ್ದೇ ಎನ್ನಲಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಹೌದು, ಕಿಚ್ಚ ಸುದೀಪ್ ಅಭಿನಯದ ‘ಬಿಲ್ಲ ರಂಗ ಭಾಷ’ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಈ ಚಿತ್ರ ಯಾವ ರೀತಿ ಇರುತ್ತದೆ ಎಂಬುದೇ ಒಂದು ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ಉದಾಹರಣೆ ಎಂಬತೆ ಚಿತ್ರತಂಡವು ಮೊದಲು ರಿವಿಲ್ ಮಾಡಿದ ಫೋಟೋಗಳ ದೊಡ್ಡ ಉದಾಹರಣೆಯಾಗಿದೆ.
ಇನ್ನು ಕಳೆದ 2 ತಿಂಗಳಿಂದ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಮೊದಲ ಶೆಡ್ಯೂಲ್ ಚಿತ್ರೀಕರಣದಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿದೆ ಸಿನಿಮಾ ತಂಡ. ಈ ನಡುವೆ ಸೋಮವಾರದಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದ್ದು, ಸೆಟ್ನದ್ದೇ ಎನ್ನಲಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನಟ ಅಮೀರ್ ಖಾನ್ ಕುಶಲೋಪರಿ ವಿಚಾರಿಸಿದ ಸಿಎಂ
ಆರಂಭಿಕ ಶೆಡ್ಯೂಲ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯುತ್ತಿದೆ. ಸಂಪೂರ್ಣ ಚಿತ್ರ ಸೆಟ್ ಹಾಗೂ ಸಿಜೆಯಲ್ಲೇ ಮಾಡಬೇಕಾದ ಅನಿವಾರ್ಯತೆ ಇದೆ. ಕಾರಣ ಇದು ಭವಿಷತ್ ಕಾಲವನ್ನು ಸೂಚಿಸುವ ವಿಭಿನ್ನ ಸಿನಿಮಾವಾಗಿದೆ. ಇದೀಗ ಸೆಟ್ನದ್ದೇ ಎನ್ನಲಾದ ವೈರಲ್ ಫೋಟೋ ಭಾರೀ ಕುತೂಹಲ ಕ್ರಿಯೇಟ್ ಮಾಡಿದೆ.
