ಜಗತ್ತಿನ ದುಡ್ಡನ್ನ ಎಂದೇ ಖ್ಯಾತಿ ಹೊಂದಿರುವ ಅಮೆರಿಕ ಹಾಗೂ ಇರಾನ್ ನಡುವೆ ಈಗಾಗಲೇ ಕದನ ನಡೆಯುತ್ತಿದ್ದು, ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತೆ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದರೆ, ಇರಾನ್ ಪ್ರತೀಕಾರವಾಗಿ ಮತ್ತೆ ಅಮೆರಿಕದ ಮೇಲೆ ದಾಳಿ ನಡೆಸುತ್ತಿದೆ.
ಹೌದು, ಈಗಾಗಲೇ ಅಮೆರಿಕ ಹಾಗೂ ಇರಾನ್ ಕದನ ತಾರಕಕ್ಕೇರಿದ್ದು, ಈ ಕದನದಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿದ್ದರೂ ಸಹ ನಾ ಮುಂದು ತಾ ಮುಂದು ಎಂದು ಯುದ್ಧ ಮುಂದುವರಿಸುತ್ತಿವೆ.
ಅಮೆರಿಕ ಏಟಿಗೆ ಇರಾನ್ ಎದುರೇಟು.. ಅಮೆರಿಕ ವಾಯುನೆಲೆಗಳ ಮೇಲೆ ತೂಫಾನ್ಗಳಂತೆ ತೂರಿಬಂದ ಮಿಸೈಲ್ಗಳು.. ರಾತ್ರಿ ಆಕಾಶದಲ್ಲಿ ಬಾಂಬ್ಗಳ ಸುರಿಮಳೆ.. ಹೆದರಿ ಕಕ್ಕಾಬಿಕ್ಕಿಯಾಗಿ ಓಡಿದ ನಾಗರಿಕರು. ಇದನ್ನೂ ಓದಿ: ನಟ ಅಮೀರ್ ಖಾನ್ ಕುಶಲೋಪರಿ ವಿಚಾರಿಸಿದ ಸಿಎಂ
ಪ್ರತೀಕಾರ ತೀರಿಸಿಕೊಳ್ಳುವ ಶಪಥ ಮಾಡಿದಂತೆ ಅಮೆರಿಕ ವಿರುದ್ಧ ಇರಾನ್ ಯುದ್ಧ ಆರಂಭಿಸಿದೆ. ಆಪರೇಷನ್ ಬಷಯೇರ್ ಅಲ್ ಫತಾಹ್ ಅಂದ್ರೆ ಟೈಡಿಂಗ್ ಆಫ್ ವಿಕ್ಟರಿ ಅನ್ನೋ ಹೆಸರಲ್ಲಿ ಇರಾನ್ ದಾಳಿ ನಡೆಸಿದೆ. ಕತಾರ್ ಕ್ಯಾಪಿಟಲ್ ದೋಹಾದಲ್ಲಿರುವ ಅಲ್ ಉದೈದ್ ಏರ್ಬೇಸ್ ಟಾರ್ಗೆಟ್ ಮಾಡಿದೆ. ಸೇನಾ ನೆಲೆಗಳ ಮೇಲೆ ಇರಾನ್ 6 ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದೆ. ಈ ಭೀಕರ ದಾಳಿ ನಡೆಸಿದ ಬೆನ್ನಲ್ಲೆ, ವಿಜಯದ ಘೋಷಣೆ ಅಂತ ಇರಾನ್ ಹೇಳಿಕೊಂಡಿದೆ.
