Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಶೀಘ್ರದಲ್ಲಿ ಕುಡಿಯುವ ನೀರಿನ ಬರ ನೀಗಿಸುವ ಯೋಜನೆ ಆರಂಭ: ದರ್ಶನಾಪುರ
  • Politics
  • State

ಶೀಘ್ರದಲ್ಲಿ ಕುಡಿಯುವ ನೀರಿನ ಬರ ನೀಗಿಸುವ ಯೋಜನೆ ಆರಂಭ: ದರ್ಶನಾಪುರ

admin June 21, 2025
Spread the love

ಶಹಾಪುರ: ಬಹು ದಿನಗಳಿಂದ ನಗರದ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ಪೂರ್ಣಗೊಳ್ಳಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಭೀಮಾ ನದಿಯಿಂದ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ನೀರಿನ ಮೂಲದಿಂದ 70.08 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ ಶಾಶ್ವತ ನೀರು ಒದಗಿಸುವ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಬೃಹದಾಕಾರದಲ್ಲಿ ಬೆಳೆಯುತ್ತಿರುವ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಬರ ಇಂಗಿಸುವ ಬೃಹತ್ ಯೋಜನೆ ಇದಾಗಿದ್ದು ಮುಂದಿನ 2050 ನೇ ಸಾಲಿನ ಇರಬಹುದಾದ 15.1.900 ಜನಸಂಖ್ಯೆಗೆ 135 ಲೀಟರ್ ಪ್ರತಿ ದಿನ ಪ್ರತಿಯೊಬ್ಬರಿಗೆ ಸರಬರಾಜು ಮಾಡಲು ಯೋಜಿಸಿದ್ದು, ಈ ಯೋಜನೆಯಿಂದ ಮಧ್ಯಂತರ ಅವಧಿ 2040ನೇ ಸಾಲಿನಲ್ಲಿ ದಿನಂ ಪ್ರತಿ 16 ದಶಲಕ್ಷ ಲೀಟರ್ ನೀರು ಶುದ್ಧಿಕರಿಸಿ, ಸಗಟು ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಾಗಿದೆ. ಮತ್ತು ಪೂರ್ಣ ಪ್ರಮಾಣದ ಯೋಜನೆಯಿಂದ ನಗರ ವ್ಯಾಪ್ತಿಯಲ್ಲಿ ಬರುವ 31 ವಾರ್ಡ್ಗಳು ಹಾಗೂ ಮಾರ್ಗಮಧ್ಯದ ಮಡ್ನಾಳ, ಇಂಗಳಗಿ ಮತ್ತು ಶಿರವಾಳ ಹುರಸಗುಂಡಿಗಿ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರಾದ ಪ್ರೇಮಸಿಂಗ್, ಇಇ ನರಸಿಂಗರೆಡ್ಡಿ, ಎಇಇ ಅಶೋಕಕುಮಾರ, ಎಇ ರಾಜಕುಮಾರ, ಎಇ ಶಂಕರಗೌಡ, ಕೆಯೂಡಬ್ಯೂಜೆ ವಿಜಯಕುಮಾರ, ಮಾಜಿ ಎಪಿಎಂಸಿ ಅಧ್ಯಕ್ಷ ಸೋಮನಗೌಡ ಚಿನ್ನಶೇಟ್ಟಿ, ಹಳ್ಳಿರಾವ ದೇಸಾಯಿ, ಮುಸ್ತಫ ದರ್ಬಾನ್, ಸದ್ಧಂ ದಾದುಲ್ಲಾ, ರಾಜು ಮಡ್ನಾಳ, ಬಸವರಾಜ ಚೆನ್ನೂರ ಸೇರಿದಂತೆ ಇತರರು ಇದ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಈಗ ಸ್ಲೀಪಿಂಗ್ ಸಿದ್ದರಾಮಯ್ಯ: ಆರ್‌ ಅಶೋಕ್..!

ಅಮೃತ 2.0 ಯೋಜನೆಯಡಿ ಕುಡಿಯುವ ನೀರು ಯೋಜನೆ

ನಗರಕ್ಕೆ ಅಮೃತ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯ 86.82 ಕೋಟಿ ರೂ. ವೆಚ್ಚದಲ್ಲಿ ನಗರದ ಹಾಲಿ ಇರುವ ಜಲಶುದ್ಧೀಕರಣ ಘಟಕದಿಂದ ಅಯ್ಯಪ್ಪಸ್ವಾಮಿ ಗುಡಿಯ ಹತ್ತಿರದ ಹಾಲಿ ಪ್ರಾಸ್ತಾಪಿಸಿದ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಲ್ಮಟ್ಟದ ಜಲ ಸಂಗ್ರಹಗಾರದ ವರೆಗೆ 250 ಎಮ್‌ಎಮ್ ವ್ಯಾಸ ಏರು ಕೊಳವೆ ಮಾರ್ಗ ಅಳವಡಿಸುವುದು. ಆದರ್ಶ ವಿದ್ಯಾಲಯದ ಹಿಂಭಾಗದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ 15 ಮೀಟರ್ ಎತ್ತರದ ಮೇಲ್ಮಟ್ಟದ ಜಲಸಂಗ್ರಹಗಾರದ ನಿರ್ಮಾಣ ಕಾಮಗಾರಿ. ಇದಕ್ಕಾಗಿ 8 ಜೋನ್‌ಗಳಾಗಿ ವಿಂಗಡಿಸಲಾಗಿದ್ದು, ಮತ್ತು ಹಾಲಿ ಇರುವ ಜಲಸಂಗ್ರಹಗಾರಗಳ ರಿಪೇರಿ ಮಾಡಲಾಗುವುದು ಎಂದು ತಿಳಿಸಿದರು.

30 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳು ನಿರ್ಮಾಣ

ತಾಲೂಕಿನ ಶಿರವಾಳ ಮತ್ತು ಉಕ್ಕಿನಾಳ 30 ಕೋಟಿ ರೂ. ವೆಚ್ಚದಲ್ಲಿ ಮೂರಾರ್ಜಿ ವಸತಿ ಶಾಲೆ ಟೆಂಡರ್ ಆಗಿದ್ದು ಸ್ಥಳ ಸ್ವಚ್ಚವಾಗಿರಿಸಿದೆ. ಸಗರ ಗ್ರಾಮದಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಟೆಂಡರ್ ಅಡಿಗಲ್ಲು, 9 ಕೋಟಿ ರೂ, ವೆಚ್ಚದಲ್ಲಿ ಮೈನಾರಿಟಿ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯ, 4 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕೋಣೆಗಳು, 2 ಕೋಟಿ ರೂ. ವೆಚ್ಚದಲ್ಲಿ ಕಂಪೌಂಡ್ ವಾಲ್. ನಗರದಲ್ಲಿ ಮೌಲಾನಾ ಆಜಾದ್ ವಸತಿ ಶಾಲೆಗೆ 5 ಕೋಟಿ ರೂ. ಮೈನಾರಿಟಿ ಇಲಾಖೆ ಯಡಿಯಲ್ಲಿ ಮಂಜೂರಿಯಾಗಿದೆ. ಪ್ರಜಾಸೌಧ ನಿರ್ಮಾಣಕ್ಕೆ 16 ಕೋಟಿ ರೂ. ಟೆಂಡರ್ ಕರೆಯಲಾಗಿದೆ. 356 ಕೋಟಿ ರೂ. ವೆಚ್ಚದಲ್ಲಿ ಮಲ್ಲಾಬಾದ ಏತನೀರಾವರಿ ಕಾಮಗಾರಿಗೆ ಅನುದಾನ ಮಂಜೂರಿಯಾಗಿದೆ. ಈಗೆ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಬೃಹತ್ ಕಾರ್ಯಕ್ರಮ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಸೋಮವಾರ ಐಸಿಸಿ ಸಭೆ

ಕಾಲುವೆಗಳಿಗೆ ನೀರು ಒದಗಿಸಲು ಸೋಮವಾರ ಐಸಿಸಿ ಸಭೆ ಕರೆಯಲಾಗಿದೆ. ಶೇ.75 ರಷ್ಟು ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ಶೇ.65 ರಷ್ಟು ಆಲಮಟ್ಟಿ ಜಲಾಶಯ ತುಂಬಿದೆ. ಮೊದಲನೇ ಬೆಳೆಗೆ ಯಾವುದೇ ನೀರಿನ ತೊಂದರೆ ಇಲ್ಲಾ, ಆದರೆ 2ನೇ ಬೆಳೆಗೆ ಕೈಗೆ ಬರುವ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.

ಯುಜಿಡಿ ಕಾಮಗಾರಿ ಪ್ರಾರಂಭ

ನಗರದಲ್ಲಿ ಇನ್ನೇರಡು ದಿನದಲ್ಲಿ ಯೂಜಿಡಿ ಕಾಮಗಾರಿ ಕೆಲಸ ಪ್ರಾರಂಭವಾಗಲಿದೆ. ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದು, ಸಾಮಾನ್ಯವಾಗಿ ಯುಜಿಡಿ ಕಾಮಗಾರಿ ಬಳಿಕ ರಸ್ತೆಗಳು ಹಾಳಾಗಲಿದ್ದು ಅವಗಳು ದುರಸ್ಥೀ ಕಾರ್ಯಕ್ಕೆ ಅನುದಾನ ನೀಡುವ ಭರವಸೆಯನ್ನು ಸಚಿವರು ನೀಡಿದರು.

About the Author

admin

Administrator

Visit Website View All Posts

Spread the love

Post navigation

Previous: ಸಿಎಂ ಸಿದ್ದರಾಮಯ್ಯ ಈಗ ಸ್ಲೀಪಿಂಗ್ ಸಿದ್ದರಾಮಯ್ಯ: ಆರ್‌ ಅಶೋಕ್..!
Next: ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ

Views:

10

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.