ಬೆಂಗಳೂರು: ನಗರದ ಕೆಂಪೇಗೌಡ ಬಡಾವಣೆಯ 7ನೇ ಹಂತದಲ್ಲಿ ಸಾಲು ಸರ್ಕಾರದ ವತಿಯಿಂದ ಸಾಲುಮರದ ತಿಮ್ಮಕ್ಕನಿಗೆ ನೀಡಿರುವ ಉಚಿತ ನಿವೇಶನಕ್ಕೆ ಇಂದು ಸಾಲುಮರದ ತಿಮ್ಮಕ್ಕ ಹೊಸ ಮನೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹುದಿನಗಳ ಬೇಡಿಕೆಯಾಗಿದ್ದ ನಿವೇಶನ ದೊರೆತಿರುವುದು ತುಂಬಾ ಖುಷಿ ತಂದಿದ್ದು ಇದರಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ನಿವೇಶನ ದೊರೆಯಲು ಕಾರಣಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
7ನೇ ಹಂತದ ಕೆಂಪೇಗೌಡ ಬಡಾವಣೆಯ ಎಲ್ಲಾ ರಸ್ತೆಗಳಲ್ಲೂ ಹಾಗೂ ರಿಂಗ್ ರಸ್ತೆಯಲ್ಲೂ ಲಕ್ಷಾಂತರ ಗಿಡ ನೆಡುವ ಕಾರ್ಯಕ್ರಮಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಈ ಪ್ರದೇಶವನ್ನು ಹಸಿರುಮಯಗೊಳಿಸಲು ಸತತ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಸಿಎಂ
ಈ ನಿಟ್ಟಿನಲ್ಲಿ ಬಡಾವಣೆಯ ನಿವೇಶನದಾರರು ಮನೆಯ ಮಾಲೀಕರುಗಳು ಬಡಾವಣೆಗೆ ಸಂಬಂಧಪಟ್ಟಂತ ವ್ಯಕ್ತಿಗಳು ಸರ್ಕಾರ ಹೆಚ್ಚಿನ ರೀತಿ ಸಹಕಾರ ನೀಡಿ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಕೆಂಪೇಗೌಡ ಬಡಾವಣೆಯು ನಗರದ ಎಲ್ಲಾ ಬಡಾವಣೆಗಳಿಗಿಂತ ಭಿನ್ನವಾಗಿ ಕಾಣಲು ಗಿಡ ನೆಟ್ಟು ಪೋಷಿಸಿ ಬೆಳಸಿ ಇದೊಂದು ವಿಶ್ವ ಮಟ್ಟಕ್ಕೆ ಮಾದರಿಯಾಗುವಂತೆ ಮಾಡಲು ಪ್ರಯತ್ನಪಡುತ್ತೇವೆ ಹಾಗೂ ಅಲ್ಲಿನ ನಾಗರಿಕರು ಮನೆಗೊಂದು ಗಿಡ, ನಿವೇಶನಗೊಂದು ಗಿಡ ಎಂಬಂತೆ ನಮ್ಮ ಜೊತೆ ಕೈಜೋಡಿಸಿ ಸಹಕರಿಸಿ ಎಂದರು.
ನಾವು ನೆಡುವ ಗಿಡಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುವಂತಹ ಗಿಡಮರಗಳನ್ನು ನೆಟ್ಟು ಪೋಷಿಸುವ ಬೆಳೆಸುವ ಪ್ರಯತ್ನ ಪಡಲಾಗುತ್ತದೆ ನೆಟ್ಟಗಿಡ ಇನ್ನೊಂದು ಜೀವಕ್ಕೆ ಆಧಾರವಾಗಬೇಕು ಸುಮ್ಮನೆ ವ್ಯರ್ಥ ಪ್ರಯೋಜನಕ್ಕೆ ಬಾರದ ಗಿಡಗಳನ್ನು ನೆಡುವುದಿಲ್ಲ ಎಂದರು.
