ಅಹಮದಾಬಾದ್: ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ಅಪಘಾತವದಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 274ಕ್ಕೆ ಏರಿದೆ ಎಂದು ತಿಳಿದುಬಂದಿದ್ದು, ಪತನಾ ಸ್ಥಳದಲ್ಲಿ ಅವಶೇಷಗಳ ತೆರುವು ಕಾರ್ಯಾಚರಣೆಯನ್ನು ಇಂದಿನಿಂದ ಇನ್ನಷ್ಟು ಚುರುಕುಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ವಿಮಾನದ ಒಳಭಾಗ ಪರಿಶೀಲಿಸಿ ತೆರುವು ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿಮಾನದ ಒಳಭಾಗದಲ್ಲಿ ಏನಾದರೂ ಮೃತ ದೇಹಗಳಿವೆಯೇ ಎಂದು ಪರಿಶೀಲಿಸಿ ನಂತರ ಕ್ರೇನ್ ಮೂಲಕ ಹಾಸ್ಟಲ್ ಮೇಲೆ ಪತನವಾಗಿರುವ ವಿಮಾನವನ್ನು ಹಾಸ್ಟೆಲ್ ಅವಣದಲ್ಲಿ ಇಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ವಿಮಾನ 90% ಭಾಗ ಸಂಪೂರ್ಣವಾಗಿ ಸುಟ್ಟು ಕರೆಕಲಾಗಿದ್ದು ಕೇವಲ ಹಿಂದುಗಡೆ ಭಾಗ ಮಾತ್ರ ಉಳಿದಿದೆ ಅದನ್ನು ಮಾತ್ರ ಇಳಿಸಲಾಗುತ್ತದೆ ಎಂದು ತಿಳಿದುಬಂದಿದೆ
ಇನ್ನು ವಿಮಾನವನ್ನು 2 ಕ್ರೇನ್ ಗಳ ಮೂಲಕ ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದ್ದು, ಬಳಿಕ ಅದನ್ನು ನೆಲಕ್ಕಿಳಿಸಿ ಹಾಸ್ಟೆಲ್ ಪ್ರದೇಶದಿಂದ ಸ್ಥಳಾಂತರ ಮಾಡಲಾಗುತ್ತದೆ. ಇಂದು ಸಂಜೆ ತನಕ ಕಾರ್ಯಚರಣೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ವಿಮಾನ ಅಪಘಾತ; ಕ್ಯಾಪ್ಟನ್ ಸುಮಿತ್ ಕೊನೆಯ ಕ್ಷಣದಲ್ಲಿ ಹೇಳಿದ್ದೇನು?
ವಿಮಾನ ಪತನಗೊಂಡ ಪರಿಣಾಮ ವಿಮಾನದ ಹಿಂಭಾಗ ಟೇಲ್ ಹೊರತುಪಡಿಸಿ ಇನ್ನೇನು ಉಳಿದಿಲ್ಲ. ಇಡೀ ವಿಮಾನ ಸಂಪೂರ್ಣ ನಾಶವಾಗಿದೆ. ಹಿಂಬದಿಯ ಟೇಲ್ ಅವಶೇಷಗಳು ಮಾತ್ರ ಹಾಗೇ ಉಳಿದಿದೆ. ಬಾಕಿ ಉಳಿದ ವಿಮಾನ ಸಂಪೂರ್ಣ ನಾಶವಾಗಿದೆ.
