ಭೂಮಿ ಮೇಲೆ ಜನಿಸಿರುವ ಮನುಷ್ಯನಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಆರೋಗ್ಯ ಸಮಸ್ಯೆ ಬಂತೆಂದು ದುಬಾರಿ ವೆಚ್ಚದ ಕೆಮಿಕಲ್ ಉಳ್ಳ ಔಷಧಿಗೆ ಮೊರೆ ಹೋಗುತ್ತಾರೆ. ಎಷ್ಟೇ ದುಬಾರಿ ಔಷಧಿ ತೆಗೆದುಕೊಂಡರು ಕೂಡ ಕೆಲವೊಂದು ಕಾಯಿಲೆಗಳು ಕಡಿಮೆ ಆಗದೆ ಹಾಗೆ ಉಳಿದಿರುತ್ತವೆ.
ಭೂಮಿ ಮೇಲೆ ಹುಟ್ಟಿರುವ ಮನುಷ್ಯನಿಗೆ ಯಾವುದೇ ಕಾಯಿಲೆ ಬಂದರೂ ಕೂಡ ಪ್ರತಿಯೊಂದು ಕಾಯಿಲೆಗೂ ಔಷಧಿ ಇದ್ದೇ ಇರುತ್ತದೆ.
ಹೌದು, ಭೂಮಿ ಮೇಲೆ ಹುಟ್ಟಿರುವ ಮನುಷ್ಯನಿಗೆ ಭೂಮಿ ಮೇಲೆಯೇ ಬೆಳೆಯುವ ಅದೆಷ್ಟೋ ಗಿಡಮೂಲಿಕೆಗಳಿಂದ ಮಾನವನ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಹಿಂದಿನ ಕಾಲದಲ್ಲಿ ಋಷಿಮುನಿಗಳೆಲ್ಲ ಕಾಡುಗಳಲ್ಲಿ ಸಿಗುವಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳಿಂದ ಅದೆಷ್ಟೋ ಕಾಯಿಲೆಗಳಿಗೆ ಔಷಧಿ ನೀಡುತ್ತಿದ್ದರು.
ಇನ್ನು ನಿಸರ್ಗದಲ್ಲಿ ಸಿಗುವ ವೀಳ್ಯದೆಲೆ ಎಲ್ಲರಿಗೂ ಗೊತ್ತು. ವೀಳ್ಯದೆಲೆಯನ್ನು ಸಾಮಾನ್ಯವಾಗಿ ಊಟ ಮಾಡಿದ ತಕ್ಷಣ ಸೇವನೆ ಮಾಡಿದರೆ ಊಟ ಜೀರ್ಣವಾಗುತ್ತದೆ ಎಂದು ಹೇಳುತ್ತಾರೆ. ಕೇವಲ ಊಟ ಜೀರ್ಣ ಮಾತ್ರವಲ್ಲದೇ ವೀಳ್ಯದೆಲೆಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅದೆಷ್ಟೋ ಪ್ರಯೋಜನಗಳಿವೆ ಎಂಬುದು ನಮಗೆ ಗೊತ್ತೇ ಇರುವುದಿಲ್ಲ.
ವೀಳ್ಯದೆಲೆಯಲ್ಲಿರುವ ಪ್ರಯೋಜನಗಳನ್ನು ಒಂದೊಂದಾಗಿ ತಿಳಿಯುತ್ತ ಹೋಗೋಣ ಬನ್ನಿ.
ನಮ್ಮ ಜೀರ್ಣಶಕ್ತಿ ಹೆಚ್ಚಿಸಿ ಅಜೀರ್ಣತೆಯನ್ನು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ದೂರ ಮಾಡುವಲ್ಲಿ ವೀಳ್ಯದೆಲೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನೂ ಓದಿ:ಟೊಮೆಟೊ ರಸವು ಜೀರ್ಣಾಂಗ ವ್ಯವಸ್ಥೆಗೆ ಅತ್ಯುತ್ತಮವಾದ ಟಾನಿಕ್!
ಜೀರ್ಣಕ್ರಿಯೆ ಹೆಚ್ಚಿಸುತ್ತದೆ
ವೀಳ್ಯದೆಲೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನೂ ಹೆಚ್ಚಿಸುತ್ತದೆ. ಮಲಬದ್ಧತೆಯಿಂದ ಪರಿಹಾರ ಪಡೆಯಲು, ರಾತ್ರಿಯಿಡೀ ವೀಳ್ಯದ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ಬಾಯಿಯ ಆರೋಗ್ಯ ಸುಧಾರಿಸುತ್ತದೆ
ವೀಳ್ಯದೆಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ
ಮಧುಮೇಹ ರೋಗಿಗಳು ಸಹ ವೀಳ್ಯದೆಲೆಗಳನ್ನು ಸೇವಿಸುವುದರಿಂದ ತಮ್ಮ ಮಧುಮೇಹವನ್ನು ನಿಯಂತ್ರಿಸಬಹುದು.
ಕ್ಯಾನ್ಸರ್ ವಿರೋಧಿ ಗುಣಗಳು
ಕೆಲವು ಅಧ್ಯಯನಗಳ ಪ್ರಕಾರ, ವೀಳ್ಯದೆಲೆ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ವೀಳ್ಯದೆಲೆ ತಡೆಯುತ್ತದೆ. ಇದಲ್ಲದೆ, ಹೊಟ್ಟೆ ಉಬ್ಬರಕ್ಕೆ ವೀಳ್ಯದ ಎಲೆಗಳನ್ನು ಸೇವಿಸಬಹುದು. ವೀಳ್ಯದೆಲೆ ರಸಕ್ಕೆ ಸ್ವಲ್ಪ ತುಳಸಿ ರಸ ಬೆರೆಸಿ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ. ವೀಳ್ಯದೆಲೆ ರಸ ಕುಡಿದರೆ ಕಿಡ್ನಿ ಸ್ಟೋನ್ ಕರಗಲು ಸಹಾಯಕವಾಗಿದೆ.
