ನಿನ್ನೆ ಗುಜರಾತಿನ ಅಹಮಬಾದ್ ನಲ್ಲಿ ನಡೆದೆ ಭೀಕರ ವಿಮಾನ ದುರಂತಕ್ಕೆ ಇಡೀ ದೇಶವೇ ಬೆಚ್ಚಿ ಬೀಳುವಂತಾಗಿದೆ. ಈ ವಿಮಾನ ದುರಂತದಲ್ಲಿ ಅದೆಷ್ಟೋ ಕುಟುಂಬದವರು ತಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಇದೇ ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಯುವತಿ ವಿಮಾನ ದುರಂತಕ್ಕೂ ಮುನ್ನ ಕೊನೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು, ಏರ್ ಇಂಡಿಯಾ ವಿಮಾನ AI 171 ವಿಮಾನ ಹೊರಡುವ ಕೆಲವೇ ಕ್ಷಣಗಳ ಮೊದಲು, ಮಣಿಪುರದ ತೌಬಲ್ ಜಿಲ್ಲೆಯ ನಾಂಗ್ಥೋಯ್ ಶರ್ಮಾ ಅವರ ಈ ಕೊನೆಯ ಸಂದೇಶವು ವೈರಲ್ ಆಗಿದೆ. ಪ್ರಯಾಣಿಕರು ಹತ್ತುವ ಮುನ್ನ ಆಕೆ ಸೆರೆ ಹಿಡಿದ ಖಾಲಿ ವಿಮಾನದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ದುರದೃಷ್ಟಕರ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಣಿಪುರದ ಗಗನಸಖಿ ನಾಂಗ್ಥೋಯ್ ಶರ್ಮಾ ಅವರ ಅಕಾಲಿಕ ನಷ್ಟಕ್ಕೆ ಇಡೀ ಕುಟುಂಬ ಕಣ್ಣೀರು ಇಡುತ್ತಿದೆ.
